ಸಮೀಕ್ಷೆಗೆ ಮೊದಲ ದಿನವೇ ಅಡಚಣೆ: ಕಚೇರಿಯ ಕೀ ಸಿಗದೇ ಬೀಗ ಒಡೆದು ಬಾಗಿಲು ತೆರೆದ ಸಿಬ್ಬಂದಿ

Updated on: Oct 04, 2025 | 11:41 AM

ಬೆಂಗಳೂರಿನಲ್ಲಿ ಇಂದಿನಿಂದ ಆರಂಭಗೊಂಡ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಬಿಬಿಎಂಪಿ ಸಿಬ್ಬಂದಿಗೆ ಮೊದಲ ದಿನವೇ ಅಡಚಣೆಯುಂಟಾಗಿದೆ. ಶ್ರೀರಾಮಪುರದ ದೇವಯ್ಯ ಪಾರ್ಕ್ ಬಳಿಯ ಬಿಬಿಎಂಪಿ ಕಚೇರಿಯ ಕೀ ಸಿಗದೆ ಬೀಗ ಒಡೆದು ಬಾಗಿಲು ತೆರೆಯಲಾಗಿದೆ. ಈ ಘಟನೆ ಸಮೀಕ್ಷೆಯ ಮೊದಲ ದಿನದ ಆರಂಭಿಕ ಅವ್ಯವಸ್ಥೆಯನ್ನು ಎತ್ತಿ ತೋರಿಸಿದೆ.

ಬೆಂಗಳೂರು, ಅ.4: ಬೆಂಗಳೂರಿನಲ್ಲಿ ಇಂದಿನಿಂದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ (Cast Census Karnataka) ನಡೆಸಲು ಮುಂದಾಗಿದ್ದು, ಸಮೀಕ್ಷೆಯ ಮೊದಲ ದಿನವೇ ಸಿಬ್ಬಂದಿ ಯಡವಟ್ಟು ಮಾಡಿಕೊಂಡಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಜಿಬಿಎ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲು ಹೋದ ಸಿಬ್ಬಂದಿಗಳು ಕಚೇರಿಯ ಮುಂದೆ ಕಾದು ಕುಳಿತ್ತಿದ್ದಾರೆ. ಶ್ರೀರಾಮಪುರದ ದೇವಯ್ಯ ಪಾರ್ಕ್ ಬಳಿಯ ಬಿಬಿಎಂಪಿ ಕಚೇರಿಯ ಬಾಗಿಲಿನ ಕೀ ಸಿಗದೇ ಸಿಬ್ಬಂದಿಗಳು ಪರದಾಡಿದ್ದಾರೆ. ಬೆಳಿಗ್ಗೆ 9:30ಕ್ಕೆ ಸಮೀಕ್ಷೆ ಆರಂಭಗೊಳ್ಳಬೇಕಿತ್ತು. ಆದರೆ, ಕಚೇರಿ ತೆರೆಯಲು ಕೀ ಇಲ್ಲದ ಕಾರಣ ಸಮೀಕ್ಷಕರು ಕಾಯಬೇಕಾದ ಸ್ಥಿತಿ ಎದುರಾಗಿತ್ತು. ಕೊನೆಗೆ ಕೀ ಸಿಗದ ಹಿನ್ನೆಲೆಯಲ್ಲಿ ಬಿಬಿಎಂಪಿ ಸಿಬ್ಬಂದಿ ಬೀಗ ಒಡೆದು ಬಾಗಿಲು ತೆರೆದಿದ್ದಾರೆ. ಇದು ಸಮೀಕ್ಷೆಯ ಮೊದಲ ದಿನದ ಸಿದ್ಧತೆಯಲ್ಲಿನ ಲೋಪವನ್ನು ಎತ್ತಿ ತೋರಿಸಿದೆ. ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳಲ್ಲಿ ನಡೆಯುವ ಈ ಮಹತ್ವದ ಸಮೀಕ್ಷೆಗೆ ಮೊದಲ ದಿನವೇ ಇಂತಹ ಅಡೆತಡೆ ಎದುರಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ