ಕಾಡಾನೆ ದಾಳಿಯಿಂದ ಕಾರ್ಮಿಕನ ಸಾವು, ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್

|

Updated on: Jan 05, 2024 | 1:08 PM

ಮತ್ತಾವರ ಹೆಸರಿನ ಗ್ರಾಮದ ಬಳಿ ಕಾಡಾನೆಯೊಂದರ ದಾಳಿಯಲ್ಲಿ ವಸಂತ್ ಹೆಸರಿನ ಕಾರ್ಮಿಕ ಮೃತಪಟ್ಟಿದ್ದು, ಅಮಾಯಕ ಜನ ಮೇಲಿಂದ ಮೇಲೆ ಹೀಗೆ ಕಾಡುಪ್ರಾಣಿಗಳ ದಾಳಿಗೆ ತುತ್ತಾಗುತ್ತಿದ್ದರೂ, ಸರ್ಕಾರ ನಿರ್ಲಕ್ಷ್ಯ ಭಾವ ತಳೆದಿರುವುದನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಹಾಸನ: ವನ್ಯಮೃಗಗಳ ದಾಳಿಯಿಂದ ಅರಣ್ಯಪ್ರದೇಶಗಳ ಸಮೀಪ ಇರುವ ಗ್ರಾಮದ ನಿವಾಸಿಗಳು ಬಲಿಯಾಗುತ್ತಿರುವ ಘಟನೆಗಳು ಹೆಚ್ಚುತ್ತಿದ್ದರೂ ಅರಣ್ಯ ಇಲಾಖೆ ಅಥವಾ ಸರ್ಕಾರ ಜನರ ರಕ್ಷಣೆಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಜಿಲ್ಲೆಯ ಬೇಲೂರು ತಾಲ್ಲೂಕಿನ ಮತ್ತಾವರ ಹೆಸರಿನ ಗ್ರಾಮದ ಬಳಿ ಕಾಡಾನೆಯೊಂದರ ದಾಳಿಯಲ್ಲಿ (wild elephant attack) ವಸಂತ್ ಹೆಸರಿನ ಕಾರ್ಮಿಕ ಮೃತಪಟ್ಟಿದ್ದು, ಅಮಾಯಕ ಜನ ಮೇಲಿಂದ ಮೇಲೆ ಹೀಗೆ ಕಾಡುಪ್ರಾಣಿಗಳ ದಾಳಿಗೆ ತುತ್ತಾಗುತ್ತಿದ್ದರೂ, ಸರ್ಕಾರ ನಿರ್ಲಕ್ಷ್ಯ ಭಾವ ತಳೆದಿರುವುದನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು. ಅರಣ್ಯ ಸಚಿವ ಈಶ್ವರ್ ಖಂಡ್ರೆಯವರನ್ನು (Eshwar Khandre) ತಮ್ಮೂರಿಗೆ ಕರೆಸಬೇಕೆಂದು ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಆಗಮಿಸಿದ ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್ (Hullahalli Suresh) ಜನರನ್ನು ಸಮಾಧಾನಪಡಿಸಿದರಲ್ಲದೆ ಸ್ಥಳದಲ್ಲಿದ್ದ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇಂಥ ಘಟನೆ ಮರುಕಳಿಸದಂತೆ ಎಚ್ಚರ ವಹಿಸದಿದ್ದರೆ ಉಗ್ರಕ್ರಮ ಎದುರಿಸಬೇಕಾದೀತು ಶಾಸಕ ಅಧಿಕಾರಿಗಳನ್ನು ಎಚ್ಚರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ