ಬೆಂಗಳೂರು ಏಳು ಮಂದಿ ಕೊಲೆ ಪ್ರಕರಣ: ‘ನನಗೆ ಈಗ ಸಮಾಧಾನ ಆಗುತ್ತಿದೆ’ಎಂದ ಇಂದು ಶೇಖರ್!

Updated on: Nov 14, 2026 | 12:41 PM

ಬೆಂಗಳೂರಿನ ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣದಲ್ಲಿ ಆರೋಪಿ ಇಂದುಶೇಖರ್ ನೀಡಿರುವ ಹೇಳಿಕೆಗಳು ಬೆಳಕಿಗೆ ಬಂದಿವೆ. ‘ನನಗೆ ಈಗ ಸಮಾಧಾನ ಆಗುತ್ತಿದೆ’ ಎಂದಿರುವ ಆತ, ಕೌಟುಂಬಿಕ ಕಲಹವನ್ನು ಹತ್ಯೆಗೆ ಕಾರಣವೆಂದು ತಿಳಿಸಿದ್ದಾನೆ ಎನ್ನಲಾಗಿದೆ. ಮತ್ತೊಂದೆಡೆ, ಆಸ್ತಿಯ ಆಸೆಗಾಗಿ ತಂದೆಗೆ ಸಹಕರಿಸಿದ್ದಾಗಿ ಪುತ್ರಿ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದ್ದು, ಕೊಲೆ, ಸಾಕ್ಷ್ಯ ನಾಶ ಹಾಗೂ ಮೃತದೇಹಗಳ ಸಾಗಾಟದಲ್ಲಿ ಆಕೆಯ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಬೆಂಗಳೂರು, ನವೆಂಬರ್ 14: ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣದಲ್ಲಿ ಆರೋಪಿ ಇಂದುಶೇಖರ್ ಮತ್ತು ಆತನ ಪುತ್ರಿಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂಬುದು ವಿಚಾರಣೆ ವೇಳೆ ಬಹಿರಂಗವಾಗಿದೆ.ನನಗೆ ಈಗ ಸಮಾಧಾನ ಆಗುತ್ತಿದೆ ಎಂದು ಇಂದುಶೇಖರ್ ಹೇಳಿದ್ದಾನೆ ಎನ್ನಲಾಗಿದೆ. ಹೆಂಡತಿ ತನ್ನನ್ನು ಕೀಳಾಗಿ ನೋಡುತ್ತಿದ್ದಳು, ಬೈಯುತ್ತಿದ್ದಳು. ಕುಟುಂಬದವರೂ ಆಕೆಗೆ ಬೆಂಬಲ ನೀಡುತ್ತಿದ್ದರು. ಇದೇ ಕಾರಣಕ್ಕೆ ಹತ್ಯೆ ಮಾಡಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ.

ಇನ್ನೊಂದೆಡೆ, “ಅಪ್ಪನಿಗೆ ನಾನು ಸಹಾಯ ಮಾಡಿದೆ” ಎಂದು ಪುತ್ರಿ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ. ಶ್ರೀರಾಮಪುರದಲ್ಲಿರುವ ಪತ್ನಿಯ ಕುಟುಂಬದ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಡುವುದಾಗಿ ತಂದೆ ಭರವಸೆ ನೀಡಿದ್ದರಿಂದ ಸಹಕರಿಸಿದ್ದಾಗಿ ತಿಳಿಸಿದ್ದಾಳೆ. ತಂದೆಯ ಕೊಲೆ ಯೋಜನೆ ತಿಳಿದಿದ್ದರೂ ಸುಮ್ಮನಿದ್ದ ಪುತ್ರಿ, ಕೊಲೆ, ಸಾಕ್ಷ್ಯ ನಾಶ ಹಾಗೂ ಮೃತದೇಹಗಳ ಸಾಗಾಟದಲ್ಲೂ ನೆರವಾಗಿದ್ದಾಳೆ ಎಂಬ ಆರೋಪವಿದೆ. ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಲು ಪಿನಾಯಿಲ್ ಮತ್ತು ಲೈಸಾಲ್ ತಂದಿದ್ದಳು ಎನ್ನಲಾಗಿದೆ. ಕೊಲೆಗೂ ಮುನ್ನ ಸ್ಟಾಂಪ್ ಪೇಪರ್ ಸಿದ್ಧಪಡಿಸಿದ್ದ ಇಂದುಶೇಖರ್, ಏಳು ಮಂದಿಯ ಹೆಬ್ಬೆಟ್ಟು ಗುರುತುಗಳನ್ನು ಪಡೆದುಕೊಂಡಿದ್ದ. ಹತ್ಯೆ ಹೊರಬರುವುದಿಲ್ಲ, ಆಸ್ತಿಯನ್ನು ಅನುಭವಿಸಬಹುದು ಎಂದು ಆತ ಭಾವಿಸಿದ್ದ ಎನ್ನಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More