ಮಳೆಗಾಲ ಕೊನೆಗೊಂಡರೂ ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ರಾತ್ರಿ ಧಾರಾಕಾರ ಮಳೆ!
ನಗರದ ಮೆಜೆಸ್ಟಿಕ್, ಶಾಂತಿನಗರ, ಕೆಆರ್ ಮಾರ್ಕೆಟ್, ಬನಶಂಕರಿ, ಜಯನಗರ, ವಿಜಯನಗರ, ರಾಜಾಜಿನಗರ, ಹೆಗಡೆ ನಗರ, ಕೊತ್ತನೂರು, ಯಲಹಂಕ, ಹೆಣ್ಣೂರು ಪ್ರದೇಶಗಳು ಸೇರಿದಂತೆ ಹಲವಾರು ಭಾಗಗಳಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ. ಸೋಮವಾರ ಬೆಳಗ್ಗೆಯೂ ಕೆಲವು ಪ್ರದೇಶಗಳಲ್ಲಿ ತುಂತುರು ಮಳೆಯಾಗುತಿತ್ತು.
ಬೆಂಗಳೂರು: ಮಳೆಗಾಲದಲ್ಲಿ (rainy season) ಸುರಿಯದ ಮಳೆ ನಿನ್ನೆ ನಗರದಲ್ಲಿ ರಾತ್ರಿ ಸುರಿದಿದೆ. ವೀಕೆಂಡ್ (weekend) ಅಂತ ಹೊರಗಡೆ ಸುತ್ತಲು, ಶಾಪಿಂಗ್ ಮಾಡಲು ಹೋದವರು ಜೋರಾಗಿ ಸುರಿಯಲಾರಂಭಿಸಿದ ಮಳೆಯಿಂದಾಗಿ ತಾವು ಮನೆಯಿಂದ ಹೊರಬಿದ್ದ ಘಳಿಗೆಯನ್ನು ಶಪಿಸಿಕೊಂಡರು. ಆದರೆ, ಸೀಸನ್ (season) ಯಾವುದಾದರೇನು? ಬೆಂಗಳೂರು ಮಾತ್ರವಲ್ಲ, ಇಡೀ ರಾಜ್ಯಕ್ಕೆ ಮಳೆ ಬೇಕಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಕೊರತೆ ಮಳೆಯ ಕಾರಣ ಬೇಸಿಗೆಯಲ್ಲಿ ಬೆಂಗಳೂರು ನಿವಾಸಿಗಳಿಗೆ ಕುಡಿಯಲು ನೀರು ಸಿಗದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಹಾಗಾಗಿ ಮಳೆ ಬೇಕೇಬೇಕು ವರುಣಮ ಕೃಪೆ ಮುಂದುವರಿಯಬೇಕು. ನಗರದ ಮೆಜೆಸ್ಟಿಕ್, ಶಾಂತಿನಗರ, ಕೆಆರ್ ಮಾರ್ಕೆಟ್, ಬನಶಂಕರಿ, ಜಯನಗರ, ವಿಜಯನಗರ, ರಾಜಾಜಿನಗರ, ಹೆಗಡೆ ನಗರ, ಕೊತ್ತನೂರು, ಯಲಹಂಕ, ಹೆಣ್ಣೂರು ಪ್ರದೇಶಗಳು ಸೇರಿದಂತೆ ಹಲವಾರು ಭಾಗಗಳಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ. ಸೋಮವಾರ ಬೆಳಗ್ಗೆಯೂ ಕೆಲವು ಪ್ರದೇಶಗಳಲ್ಲಿ ತುಂತುರು ಮಳೆಯಾಗುತಿತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ