AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ: ಆಟೋ ಚಾಲಕರ ವಿಶೇಷ ಕೆಲಸ

ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ: ಆಟೋ ಚಾಲಕರ ವಿಶೇಷ ಕೆಲಸ

ಅಕ್ಷಯ್​ ಪಲ್ಲಮಜಲು​​
|

Updated on: Dec 31, 2025 | 10:47 PM

Share

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಸಿದ್ಧತೆ ನಡೆಯುತ್ತಿದ್ದು, ಮದ್ಯ ಸೇವಿಸಿ ಅಮಲೇರಿದವರಿಗೆ ಆಟೋ ಚಾಲಕರು ಉಚಿತ ಡ್ರಾಪ್ ಸೇವೆ ನೀಡಲು ಮುಂದಾಗಿದ್ದಾರೆ. ಬೆಂಗಳೂರಿನ ಯಾವುದೇ ಮೂಲೆಯಾದರೂ ಸುರಕ್ಷಿತವಾಗಿ ತಲುಪಿಸಲಾಗುವುದು. ಪೊಲೀಸ್ ಇಲಾಖೆಯ ಸಹಯೋಗದಲ್ಲಿ 25ಕ್ಕೂ ಹೆಚ್ಚು ಆಟೋಗಳು ಈ ವಿನೂತನ ಸೇವೆಗೆ ಸಿದ್ಧವಾಗಿವೆ. ಇದು ಸುರಕ್ಷಿತ ಹೊಸ ವರ್ಷಾಚರಣೆಗೆ ಸಹಕಾರಿ.

ಬೆಂಗಳೂರು, ಡಿ.31: ಹೊಸ ವರ್ಷದ ಸಂಭ್ರಮಕ್ಕೆ ಬೆಂಗಳೂರು ಸಿದ್ಧವಾಗಿದ್ದು, ಪಾರ್ಟಿ ಪ್ರಿಯರಿಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಅದರಲ್ಲೂ ಮದ್ಯ ಸೇವಿಸಿ ಅಮಲೇರಿದವರಿಗಾಗಿ ಬೆಂಗಳೂರಿನ ಆಟೋ ಚಾಲಕರು ವಿನೂತನ ಸೇವೆಗೆ ಮುಂದಾಗಿದ್ದಾರೆ. ನಗರದ ಯಾವುದೇ ಭಾಗದಲ್ಲಿ ಮನೆ ಇರುವ ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಪೊಲೀಸ್ ಇಲಾಖೆಯ ನಿರ್ದೇಶನದ ಮೇರೆಗೆ ಸುಮಾರು 25 ಆಟೋಗಳನ್ನು ಈ ಸೇವೆಗೆ ನಿಯೋಜಿಸಲಾಗಿದೆ. ಮುಖ್ಯವಾಗಿ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಮಹಿಳಾ ಪೊಲೀಸರೊಂದಿಗೆ ಸುರಕ್ಷಿತವಾಗಿ ಅವರನ್ನು ಮನೆಗೆ ತಲುಪಿಸಲಾಗುವುದು. ಪ್ರಜ್ಞೆ ಕಳೆದುಕೊಂಡವರು ಅಥವಾ ಆರೋಗ್ಯದಲ್ಲಿ ಏರುಪೇರಾದವರಿಗೂ ಈ ಸೇವೆ ಲಭ್ಯವಿದೆ. ಈ ಸೇವೆಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ, ಆದರೆ ಪ್ರೀತಿಯಿಂದ ನೀಡಿದರೆ ಸ್ವೀಕರಿಸಲಾಗುವುದು ಎಂದು ಚಾಲಕರು ತಿಳಿಸಿದ್ದಾರೆ. ಗಲಾಟೆಗಳನ್ನು ತಪ್ಪಿಸಿ ಸುರಕ್ಷಿತ ಹೊಸ ವರ್ಷಾಚರಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ