ಬೆಂಗಳೂರು: ಏಕಾಏಕಿ ಪೆಟ್ರೋಲ್ ಬಂಕ್ಗೆ ನುಗ್ಗಿದ ಕಂಟೇನರ್ ಲಾರಿ, ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
ಚಾಮರಾಜಪೇಟೆಯ ನಯಾರಾ ಪೆಟ್ರೋಲ್ ಬಂಕ್ನಲ್ಲಿ ಬುಧವಾರ ಸಂಜೆ ಏಕಾಏಕಿ ಕಂಟೇನರ್ ಲಾರಿಯೊಂದು ನುಗ್ಗಿಬಂದು ಗುದ್ದಿದ ಪರಿಣಾಮ ಅಂಗಡಿಗೆ ಹಾನಿಯಾಗಿದ್ದು, ಸಿಬ್ಬಂದಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಸಾವು-ನೋವು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಘಟನೆಯ ಭೀಕರ ದೃಶ್ಯ ಸಿಟಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಟಿಟಿವಿ ವಿಡಿಯೋ ಇಲ್ಲಿದೆ.
ಬೆಂಗಳೂರು, ಅಕ್ಟೋಬರ್ 9: ಶ್ರೀರಂಗಪಟ್ಟಣದಿಂದ ಕೆಆರ್ ಮಾರ್ಕೆಟ್ಗೆ ಅಡುಗೆ ಎಣ್ಣೆ ಕೊಂಡೊಯ್ಯುತ್ತಿದ್ದ ಕಂಟೇನರ್ ಲಾರಿಯೊಂದು ಬ್ರೇಕ್ ಫೇಲ್ ಆಗಿ ಏಕಾಏಕಿ ಪೆಟ್ರೋಲ್ ಬಂಕ್ಗೆ ನುಗ್ಗಿದ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಬುಧವಾರ ಸಂಜೆ ನಡೆದಿದೆ. ಕಂಟೇನರ್ ನುಗ್ಗಿದ ರಭಸಕ್ಕೆ ಪೆಟ್ರೋಲ್ ಬಂಕ್ ಒಳಗಿದ್ದ ಅಂಗಡಿ ಜಖಂಗೊಂಡಿದೆ. ಅಂಗಡಿ ಒಳಗಿದ್ದ ಸಿಬ್ಬಂದಿ ಹಾಗೂ ಕಂಟೈನರ್ ಚಾಲಕನ ಕೈಗೆ ಗಾಯಗಳಾಗಿವೆ. ಘಟನೆ ಸಂದರ್ಭ ಅನೇಕ ಗ್ರಾಹಕರು ಬೈಕ್ ಹಾಗೂ ಇತರ ವಾಹನಗಳಿಗೆ ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದರು. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಘಟನೆಯ ಭೀಕರ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ವರದಿ ಮತ್ತು ವಿಡಿಯೋ: ವಿಕಾಸ್, ಟಿವಿ9 ಬೆಂಗಳೂರು