Video: 4.5 ಲಕ್ಷ ರೂ. ಮೌಲ್ಯದ ಮೂರು ಹಸುಗಳ ಕಳ್ಳತನ, ಸಿಸಿಟಿವಿ ವಿಡಿಯೋ ವೈರಲ್
ಬೆಂಗಳೂರಿನ ಸಂಪಿಗೇಹಳ್ಳಿಯ ಮಂಜುನಾಥ ಲೇಔಟ್‌ನಲ್ಲಿ ₹4.5 ಲಕ್ಷ ಮೌಲ್ಯದ 3 ಹಸುಗಳನ್ನು ಕಳ್ಳತನ ಮಾಡಲಾಗಿದೆ. ಲಕ್ಷ್ಮಣ್ ಎಂಬುವರಿಗೆ ಸೇರಿದ ದನಗಳನ್ನು ಐದು ಜನರ ತಂಡ ಮಿನಿ ಟೆಂಪೋದಲ್ಲಿ ಕದ್ದೊಯ್ದಿದೆ. ಈ ಘಟನೆ ಗುರುವಾರ ರಾತ್ರಿ 1.20ಕ್ಕೆ ನಡೆದಿದ್ದು, ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.
ಬೆಂಗಳೂರು, ಡಿ.27: ಮನೆ ಬಳಿಯ ಖಾಲಿ ಜಾಗದಲ್ಲಿದ್ದ ಹಸುಗಳ ಕಳ್ಳತನ ಮಾಡಿರುವ ಘಟನೆ ನಗರದ ಸಂಪಿಗೇಹಳ್ಳಿಯ ಮಂಜುನಾಥ ಲೇಔಟ್‌ನಲ್ಲಿ ನಡೆದಿದೆ. 4.5 ಲಕ್ಷ ರೂ. ಮೌಲ್ಯದ ಮೂರು ಹಸುಗಳ ಕಳ್ಳತನ ಮಾಡಲಾಗಿದೆ. ಲಕ್ಷ್ಮಣ್ ಎಂಬುವರಿಗೆ ಸೇರಿದ್ದ ಮೂರು ಹಸುಗಳು ಎಂದು ಹೇಳಲಾಗಿದೆ. ಗುರುವಾರ (ಡಿ.25) ರಾತ್ರಿ 1.20ಕ್ಕೆ ಧನಗಳನ್ನು ಕಳ್ಳತನ ಮಾಡಲಾಗಿದೆ ಎಂದು ಹೇಳಲಾಗಿದೆ. ಮಿನಿ ಟೆಂಪೋದಲ್ಲಿ ಬಂದ ಐದು ಜನ ಹಸುಗಳ ಕಳ್ಳತನ ಮಾಡಿದ್ದಾರೆ. ಖಾಲಿ ಜಾಗದಲ್ಲಿ ಹಸುಗಳನ್ನು ಕಟ್ಟಿದ್ದ ಲಕ್ಷ್ಮಣ್, ಬೆಳಿಗ್ಗೆ ಬಂದು ನೋಡಿದ್ರೆ ಹಸುಗಳು ಅಲ್ಲಿ ಇರಲಿಲ್ಲ. ಸಮೀಪದ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಹಸುಗಳನ್ನು ಕರೆದುಕೊಂಡು ಹೋಗುವುದು ತಿಳಿದಿದೆ. ಇದೀಗ ಈ ಬಗ್ಗೆ ದೂರು ಕೂಡ ನೀಡಲಾಗಿದೆ.
ವರದಿ: ಪ್ರದೀಪ್
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ