ತುಂಬಾ ಒಳ್ಳೆ ಕೆಲಸ ಮಾಡಿದ್ದಾರೆ ಸಂತೋಷ… ರಸ್ತೆ ಗುಂಡಿ ಮುಚ್ಚಿ ಪ್ರತಿಭಟನೆ ನಡೆಸಿದ ಬಿಜೆಪಿಗೆ ಟಾಂಗ್‌ ಕೊಟ್ಟ ಡಿಕೆಶಿ

Updated on: Sep 25, 2025 | 6:42 PM

ರಸ್ತೆ ಗುಂಡಿಗಳನ್ನು ಮುಚ್ಚದ ಸರ್ಕಾರದ ವಿರುದ್ಧ ಬಿಜೆಪಿ ವಿನೂತನ ಪ್ರತಿಭಟನೆ ನಡೆಸುತ್ತಿದೆ. ಸ್ವತಃ ತಾವೇ ಗುಂಡಿ ಮುಚ್ಚುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ರಸ್ತೆ ಗುಂಡಿ ಮುಚ್ಚಿ ಬಹಳ ಒಳ್ಳೆ ಕೆಲಸ ಮಾಡ್ತಿದ್ದಾರೆ ಮಾಡ್ಲಿ ಎಂದು ಬಿಜೆಪಿಗೆ ಟಾಂಗ್‌ ಕೊಟ್ಟಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್‌ 25: ರಾಜ್ಯಾದ್ಯಂತ ಬಹುತೇಕ ರಸ್ತೆಗಳು ಹದಗೆಟ್ಟು ಹೋಗಿವೆ. ಈ ಬಗ್ಗೆ ಗಮನ ಸೆಳೆಯಲು ವಿರೋಧ ಪಕ್ಷ ಬಿಜೆಪಿ ಬುಧವಾರ (ಸೆ. 24) ವಿನೂತನ ಪ್ರತಿಭಟನೆಯನ್ನು ಮಾಡಿದೆ. ಸ್ವತಃ ಬಿಜೆಪಿ ನಾಯಕರು ರಸ್ತೆಗುಂಡಿಗಳನ್ನು ಮುಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್‌ (D.K. Shivakumar) ರಸ್ತೆ ಗುಂಡಿ ಮುಚ್ಚಿ ಬಹಳ ಒಳ್ಳೆ ಕೆಲಸ ಮಾಡ್ತಿದ್ದಾರೆ, ಮಾಡ್ಲಿ ಬಿಡಿ, ಪಾಪ ನಮ್‌ ಮನೆ ಮುಂದೆಯೇ ಬಂದು ಗುಂಡಿ ಮುಚ್ಚಿದ್ದಾರೆ ಬಹಳ ಸಂತೋಷ ಹೀಗೆ ಪಬ್ಲಿಸಿಟಿ ಮಾಡ್ಕೊಳ್ಳಿ ಎಂದು ಸಖತ್‌ ಟಾಂಗ್‌ ಕೊಟ್ಟಿದ್ದಾರೆ. ಇನ್ನೂ ಗುಂಡಿ ಮುಚ್ಚುವ ಕಾರ್ಯದ ಬಗ್ಗೆ ಮಾತನಾಡಿದ ಇವರು ಎಲ್ಲೆಲ್ಲಿ ಗುಂಡಿಗಳಿವೆ, ಅದರ ಫೋಟೋಗಳನ್ನು ತೆಗೆದು ನಮ್ಮ ಆಪ್‌ಗೆ ಅಪ್‌ಲೋಡ್‌ ಮಾಡಿ ಎಂದು  ನಾನೇ ಹೇಳಿದ್ದೀನಿ. ಅವುಗಳನ್ನೆಲ್ಲಾ ಲಿಸ್ಟ್‌ ಮಾಡಿಕೊಂಡು ಒಂದೊಂದೆ ಗುಂಡಿಗಳನ್ನು ಮುಚ್ಚುವಂತಹ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ