Bengaluru: ಬಿ.ಎಸ್​ ಯಡಿಯೂರಪ್ಪರವರನ್ನ ನಿಧಾನವಾಗಿ ಬಿಜೆಪಿ ಕಡೆಗಣಿಸುತ್ತಿದೆಯಾ..?

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 22, 2023 | 9:09 AM

ಬಿಎಸ್​ವೈ ರವರು ಯಾವಾಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೊ ಅಂದಿನಿಂದ ಬಿಜೆಪಿ ಅವರನ್ನ ಕಡೆಗಣಿಸುತ್ತಾ ಬರುತ್ತಿದೆಯಾ...?

ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಅವರು  ರಾಜಿನಾಮೆ ಕೊಟ್ಟ ಮೇಲೆ ಬಿಜೆಪಿ ಕಡೆಗಣಿಸುತ್ತಿದೆಯಾ ಅವರನ್ನ ಎಂಬ ಮಾತು ಕೇಳಿಬರುತ್ತಿದೆ. ಒಂದಲ್ಲಾ ಎರಡಲ್ಲಾ ಅನೇಕ ಸಭೆ ಸಮಾರಂಭಗಳಿಗೆ ಬಿಎಸ್​ವೈ ಅವರಿಗೆ ಆಹ್ವಾನ ನೀಡದೇ ಇರುವುದು ಚರ್ಚೆಗೆ ಗ್ರಾಸವಾಗಿದೆ. ನಿನ್ನೆ(ಜ.21) ಮಲ್ಲೆಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ ಚುನಾವಣಾ ತಂತ್ರಗಾರಿಕೆ ಸಭೆಗೆ ಬಿಎಸ್​ವೈ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರೂ ಅವರನ್ನ ಬಿಟ್ಟು ಸಭೆ ನಡೆಸಲಾಗಿದೆ. ಇದು ಬಿಎಸ್​ವೈ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದು ಪೂರ್ವಭಾವಿ ಸಭೆ ಅಂತಿಮ ಸಭೆಗೆ ಬಿಎಸ್​ವೈ ಅವರನ್ನ ಕರೆಯುತ್ತೆವೆ ಎಂದಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Jan 22, 2023 09:08 AM