Bengaluru Kambala: ಕರಾವಳಿಯ ಜನಪ್ರಿಯ ಕ್ರೀಡೆ ಕಣ್ತುಂಬಿಕೊಳ್ಳಲು ಹಣ ಪಾವತಿಸಬೇಕಿಲ್ಲ, ಪ್ರವೇಶ ಉಚಿತ!
Bengaluru Kambala: ನಗರದ ಪ್ರದೇಶದ ಜನರಿಗೆ ಕಂಬಳದ ಬಗ್ಗೆ ಹೆಚ್ಚು ಗೊತ್ತಿಲ್ಲ. ಪ್ರಾಯಶಃ ಇದೇ ಕಾರಣಕ್ಕೆ ಬೆಂಗಳೂರು ಕಂಬಳ ಆಯೋಜಕರು ಎರಡು ದಿನ ನಡೆಯುವ ಕಾರ್ಯಕ್ರಮಕ್ಕೆ ಪ್ರವೇಶ ಶುಲ್ಕ ಸಂಗ್ರಹಿಸುತ್ತಿಲ್ಲ. ಯಾರು ಬೇಕಾದರೂ ಅರಮನೆ ಮೈದಾನಕ್ಕೆ ತೆರಳಿ ಉಚಿತವಾಗಿ ಕಂಬಳ ನೋಡಿ ಆನಂದಿಸಬಹುದು. ಪ್ರೇಕ್ಷಕರು ಕೂತು ನೋಡಲು ಆಸನಗಳು ಮತ್ತು ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರು: ನಗರದಲ್ಲಿ ಮೊದಲ ಬಾರಿಗೆ ಅಯೋಜಿಸಲಾಗುತ್ತಿರುವ ಕಂಬಳ ಕ್ರೀಡೆಗೆ ಆರಂಭಗೊಳ್ಳಲು ಕೆಲ ಗಂಟೆಗಳು ಮಾತ್ರ ಉಳಿದಿವೆ. ಕಂಬಳದಂಥ (Kambala) ಗ್ರಾಮೀಣ ಸೊಗಡಿನ ಕ್ರೀಡೆ ಬೆಂಗಳೂರಿಗೆ ಬರುವಂತಾಗಲಿ ನಿರ್ಣಾಯಕ ಪಾತ್ರ ನಿರ್ವಹಿಸಿರುವ ಪುತ್ತೂರಿನ ಕಾಂಗ್ರೆಸ್ ಶಾಸಕ ಅಶೋಕ ರೈ (Ashok Rai), ಶನಿವಾರ ಆರಂಭಗೊಳ್ಳಲಿರುವ ಕಂಬಳದ ಬಗ್ಗೆ ವಿವರ ನೀಡಿದರು. ಕೋಣಗಳು (buffaloes) ಓಡುವ ಟ್ರ್ಯಾಕ್ ನ ಪರೀಕ್ಷಣೆ ನಡೆದಿದ್ದು ಅದನ್ನು ಅತ್ಯುತ್ತಮವಾಗಿ ಸಿದ್ಧಪಡಿಸಲಾಗಿದೆ ಎಂದು ಪರಿಣಿತರು ಅಭಿಪ್ರಾಯಪಟ್ಟಿರುವರೆಂದು ಅಶೋಕ್ ಹೇಳಿದರು. ಶನಿವಾರ ಬೆಳಗ್ಗೆ 10.30 ಕ್ಕೆ ಕಂಬಳ ಶುರುವಾದರೂ ಅಸಲಿ ಕಂಬಳದ ಕ್ರೀಡೆ ನಡೆಯೋದು ಸಾಯಂಕಾಲದ ಮೇಲೆ ಎಂದು ಹೇಳಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವತ್ತು ಸಾಯಂಕಾಲ 5.30ಕ್ಕೆ ಆಗಮಿಸಲಿದ್ದಾರೆ ಎಂದರು. ಕಂಬಳ ಸಾಮಾನ್ಯವಾಗಿ ಮಧ್ಯರಾತ್ರಿಯವರೆಗೆ ನಡೆಯತ್ತದೆ ಮತ್ತು ಸಿನಿಮಾ ತಾರೆಯರು ತಮ್ಮ ಬಿಡುವಿನ ಸಮಯ ನೋಡಿಕೊಂಡು ಅರಮನೆ ಮೈದಾನಕ್ಕೆ ಬರುತ್ತೇವೆ ಅಂದಿದ್ದಾರೆ ಎಂದು ಅಶೋಕ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ