ನೆಲಮಂಗಲ ಉಪವಿಭಾಗದಲ್ಲಿ ಅಕ್ರಮಗಳ ಬಗ್ಗೆ  ದೂರು, ಪರಿಶೀಲನೆ ನಡೆಸಿದ ಬೆಂಗಳೂರು ರೂರಲ್ ಎಸ್ ಪಿ

ಅರುಣ್​ ಕುಮಾರ್​ ಬೆಳ್ಳಿ

Updated on: Nov 17, 2023 | 10:45 AM

ಸೈಬರ್ ಸೆಂಟರ್ ಗಳಲ್ಲಿ ಹೊರರಾಜ್ಯಗಳಿಂದ ಬಂದವರ ಆಧಾರ್ ಕಾರ್ಡ್ ಗಳಲ್ಲಿ ಮಾರ್ಪಾಟು ಮಾಡುವ ಅಕ್ರಮ ನಡೆಯುತ್ತಿತ್ತಂತೆ, ಸೆಂಟರ್ ಗಳನ್ನು ನಡೆಸುವವರಿಗೆ ಎಚ್ಚರಕೆ ನೀಡಲಾಗಿದೆ ಎಂದು ಎಸ್ ಪಿ ಹೇಳಿದರು. ರಾತ್ರಿ ಸಮಯದಲ್ಲಿ ರಸ್ತೆ ಬದಿಯ ಸ್ಥಳಗಳಲ್ಲಿ ಮತ್ತು ಹಳೆ ಕಟ್ಟಡಗಳ ಆವರಣ ಮತ್ತು ಪಾರ್ಕ್ ಗಳಲ್ಲಿ ಮದ್ಯ ಸೇವನೆ ಮಾಡುತ್ತಿದ್ದವರನ್ನು ಸಹ ಎಚ್ಚರಿಸಲಾಗಿದೆ ಎಂದು ಅವರು ಹೇಳಿದರು.

ನೆಲಮಂಗಲ: ನೆಲಮಂಗಲ ಉಪ ವಿಭಾಗದ (Nelamangala sub-division) ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಕ್ಷ್ಮಿಪುರ ಬಡಾವಣೆಯು (Lakshmipura Layout) ಹಲವಾರು ಅಕ್ರಮಗಳ ತಾಣವಾಗಿದೆ ಅಂತ ಸಾರ್ವಜನಿಕರಿಂದ ದೂರು ಬಂದ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ (Mallikarjun Baladandi) ತಮ್ಮ ಸಿಬ್ಬಂದಿಯೊಂದಿಗೆ ನೈಟ್ ಪೆಟ್ರೋಲಿಂಗ್ ನಡೆಸಿದರು. ಟಿವಿ9 ಕನ್ನಡ ವಾಹಿನಿಯೊಂದಿಗೆ ಮಾತಾಡಿದ ಮಲ್ಲಿಕಾರ್ಜುನ, ಇಲ್ಲಿನ ರಸ್ತೆಯು ಮಾಗಡಿ ರಸ್ತೆಯನ್ನು ಸಂಪರ್ಕಿಸುವುದರಿಂದ ಜನ ಮತ್ತು ವಾಹನಗಳ ಓಡಾಟ ಜಾಸ್ತಿ ಇರುತ್ತದೆ ಆದರೆ ಬೀದಿದೀಪಗಳ ವ್ಯವಸ್ಥೆ ಸರಿಯಿರದ ಕಾರಣ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದರು, ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿಯೊಂದಿಗೆ ಮಾತಾಡಿ ಅದನ್ನು ಸರಿಪಡಿಲಾಗಿದೆ ಎಂದು ಹೇಳಿದರು. ಸೈಬರ್ ಸೆಂಟರ್ ಗಳಲ್ಲಿ ಹೊರರಾಜ್ಯಗಳಿಂದ ಬಂದವರ ಆಧಾರ್ ಕಾರ್ಡ್ ಗಳಲ್ಲಿ ಮಾರ್ಪಾಟು ಮಾಡುವ ಅಕ್ರಮ ನಡೆಯುತ್ತಿತ್ತಂತೆ, ಸೆಂಟರ್ ಗಳನ್ನು ನಡೆಸುವವರಿಗೆ ಎಚ್ಚರಕೆ ನೀಡಲಾಗಿದೆ ಎಂದು ಎಸ್ ಪಿ ಹೇಳಿದರು. ರಾತ್ರಿ ಸಮಯದಲ್ಲಿ ರಸ್ತೆ ಬದಿಯ ಸ್ಥಳಗಳಲ್ಲಿ ಮತ್ತು ಹಳೆ ಕಟ್ಟಡಗಳ ಆವರಣ ಮತ್ತು ಪಾರ್ಕ್ ಗಳಲ್ಲಿ ಮದ್ಯ ಸೇವನೆ ಮಾಡುತ್ತಿದ್ದವರನ್ನು ಸಹ ಎಚ್ಚರಿಸಲಾಗಿದೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.