ನೆಲಮಂಗಲ ಬಳಿ ಹೆದ್ದಾರಿ ಪರಿವೀಕ್ಷಿಸಿ ಎನ್ ಹೆಚ್ ಎಐ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ ಎಡಿಜಿಪಿ ಅಲೋಕ್ ಕುಮಾರ್

ನೆಲಮಂಗಲ ಬಳಿ ಹೆದ್ದಾರಿ ಪರಿವೀಕ್ಷಿಸಿ ಎನ್ ಹೆಚ್ ಎಐ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ ಎಡಿಜಿಪಿ ಅಲೋಕ್ ಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 02, 2023 | 7:09 PM

ನೆಲಮಂಗಲದ ಬಳಿಯ ಹೆದ್ದಾರಿಯಲ್ಲಿ ಪೊಲೀಸ್ ಪೆಟ್ರೋಲಿಂಗ್, ರಾಡಾರ್ ಸ್ಪೀಡ್ ಡಿಟೆಕ್ಟ್, ಕೆಮೆರಾ ಅಳವಡಿಕೆ ಮೊದಲಾದ ಸಂಗತಿಗಳನ್ನು ಅವರು ಪರಿವೀಕ್ಷಿಸಿದರು

ನೆಲಮಂಗಲ: ಸಂಚಾರ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಇದ್ದಲ್ಲಿ ಚಟುವಟಿಕೆಗಳು ಜೋರಾಗಿರುತ್ತವೆ. ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಹೆಚ್ಚುತ್ತಿದ್ದ ಅಪಘಾತಗಳನ್ನು ತಡೆಯಲು ರಾಜ್ಯ ಸರ್ಕಾರ ನೀಡಿದ ಟಾಸ್ಕನ್ನು ಹೊತ್ತಿರುವ ಅವರು ಕಳೆದೆರಡು ವಾರಗಳಿಂದ ಎಕ್ಸ್ ಪ್ರೆಸ್ ವೇನಲ್ಲಿ (Bengaluru Mysuru Expressway) ಓಡಾಡುತ್ತಿರುವ ವಿಡಿಯೋಗಳನ್ನು ತೋರಿಸಲಾಗಿದೆ. ಅಪಘಾತಗಳನ್ನು ತಡೆಯಲು ಅವರು ರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ (NHAI officials) ಉಪಾಯವೊಂದನ್ನು ಸೂಚಿಸಿದ್ದಾರೆ. ಆಗಸ್ಟ್ ಒಂದರಿಂದ ಎಕ್ಸ್ ಪ್ರೆಸ್ ವೇನಲ್ಲಿ ದ್ವಿಚಕ್ರ, ತ್ರಿಚಕ್ರ ಮತ್ತು ಟ್ರ್ಯಾಕ್ಟರ್ ಗಳ ಸಂಚಾರವನ್ನು ನಿಷೇಧಿಸಲಾಗಿದೆ. ಇಂದು ಅಲೋಕ್ ಕುಮಾರ್ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆದ್ದಾರಿಯ ಪರಿಶೀಲನೆ ನಡೆಸಿದರು. ನೆಲಮಂಗಲದ ಬಳಿಯ ಹೆದ್ದಾರಿಯಲ್ಲಿ ಪೊಲೀಸ್ ಪೆಟ್ರೋಲಿಂಗ್, ರಾಡಾರ್ ಸ್ಪೀಡ್ ಡಿಟೆಕ್ಟ್, ಕೆಮೆರಾ ಅಳವಡಿಕೆ ಮೊದಲಾದ ಸಂಗತಿಗಳನ್ನು ಅವರು ಪರಿವೀಕ್ಷಿಸಿದರು. ಸೇತುವೆಯೊಂದರ ಮೇಲೆ ಅವರು ಸೈನೇಜ್ ಗಳನ್ನು ಅಳವಡಿಸುವ ಬಗ್ಗೆ ಸೂಚನೆ ನೀಡುತ್ತಿರುವುದನ್ನು ಗಮನಿಸಬಹುದು. ಅಲೋಕ್ ಕುಮಾರ ಅವರೊಂದಿಗೆ ಬೆಂಗಳೂರು ಸಂಚಾರ ವಿಭಾಗದ ಜಂಟಿ ಆಯುಕ್ತ ಬಿ ಆರ್ ರವಿಕಾಂತೇ ಗೌಡ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ