Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ: ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಪಕ್ಷದ ಹೈಕಮಾಂಡ್ ಮಹತ್ವದ ಸಭೆ ಶುರುವಾಗುವ ಮೊದಲಿನ ಎಕ್ಸ್​ಕ್ಲ್ಯೂಸಿವ್ ಫುಟೇಜ್

ದೆಹಲಿ: ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಪಕ್ಷದ ಹೈಕಮಾಂಡ್ ಮಹತ್ವದ ಸಭೆ ಶುರುವಾಗುವ ಮೊದಲಿನ ಎಕ್ಸ್​ಕ್ಲ್ಯೂಸಿವ್ ಫುಟೇಜ್

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 02, 2023 | 5:20 PM

ರಾಹುಲ್ ಬಲಕ್ಕೆ ಡಿಕೆ ಶಿವಕುಮಾರ್, ಅವರ ಪಕ್ಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿ ಪರಮೇಶ್ವರ್ ಮತ್ತು ಇತರ ಮಂತ್ರಿಗಳು ಆಸೀನರಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ದೆಹಲಿ: ರಾಜ್ಯದ ಕಾಂಗ್ರೆಸ್ ನಾಯಕರ ಜೊತೆ ದೆಹಲಿ ಎಐಸಿಸಿ ಕಚೇರಿಯಲ್ಲಿ ಪಕ್ಷದ ಹೈಕಮಾಂಡ್ ಸಬೆ ನಡೆಸುತ್ತಿರುವುದು ಗೊತ್ತಿರುವ ಸಂಗತಿಯೇ. ಸಭೆ ಶುರುವಾಗುವ ಮೊದಲಿನ ಎಕ್ಸ್​ಕ್ಲ್ಯೂಸಿವ್ ಫುಟೇಜ್ ನಮಗೆ ಸಿಕ್ಕಿದೆ. ಹಾಲ್ ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬಲಭಾಗದಲ್ಲಿ ರಾಹುಲ್ ಗಾಂಧಿ (Rahul Gandhi) ಮತ್ತು ಎಡಭಾಗದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಕೆಸಿ ವೇಣುಗೋಪಾಲ್ (KC Venugopal), ರಂದೀಪ್ ಸುರ್ಜೆವಾಲಾ (Randeep Surjewala) ಕುಳಿತಿರುವುದನ್ನು ನೋಡಬಹುದು. ರಾಹುಲ್ ಬಲಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಅವರ ಪಕ್ಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿ ಪರಮೇಶ್ವರ್ ಮತ್ತು ಇತರ ಮಂತ್ರಿಗಳು ಆಸೀನರಾಗಿರುವುದನ್ನು ನೋಡಬಹುದು. ರಾಹುಲ್ ಮತ್ತು ಖರ್ಗೆ ಎದುರುಗಡೆ ಮಂತ್ರಿಗಳು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಕುಳಿತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ