Ramanagar News: ಆಗಸ್ಟ್ 1ರಿಂದ ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇನಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಓಡಿಸುವಂತಿಲ್ಲ, ಸರ್ವಿಸ್ ರೋಡ್ ಬಳಸಬೇಕು!

Ramanagar News: ಆಗಸ್ಟ್ 1ರಿಂದ ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇನಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಓಡಿಸುವಂತಿಲ್ಲ, ಸರ್ವಿಸ್ ರೋಡ್ ಬಳಸಬೇಕು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 26, 2023 | 7:22 PM

ದ್ವಿಚಕ್ರ, ತ್ರಿಚಕ್ರ ವಾಹನ ಸವಾರರು ಪ್ರತಿಭಟನೆಗೆ ಮುಂದಾದರೆ ಆಶ್ಚರ್ಯವಿಲ್ಲ.

ರಾಮನಗರ: ಇನ್ನೊಂದು ವಾರವೂ ಅಲ್ಲ, ನಿಖರವಾಗಿ ಹೇಳಬೇಕೆಂದರೆ, 5 ದಿನಗಳ ನಂತರ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ (Bengaluru-Mysuru Expressway) ದ್ವಿಚಕ್ರ, ತ್ರಿಚಕ್ರ ಮತ್ತು ಟ್ಯಾಕ್ಟರ್ ಗಳು ಓಡಾಡುವಂತಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೊರಡಿಸಿರುವ ಆದೇಶದ ಪ್ರಕಾರ ಆಗಸ್ಟ್ 1ರಿಂದ ಈ ಆದೇಶ ಜಾರಿಗೆ ಬರಲಿದೆ. ಈ ಕುರಿತಂತೆ ಈಗಾಗಲೇ ಗೆಜೆಟ್ ಅಧಿಸೂಚನೆ (gazette notification) ಹೊರಡಿಸಲಾಗಿದೆ. ಎಕ್ಸ್ ಪ್ರೆಸ್ ವೇನಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಗಟ್ಟಲು ಈ ಕ್ರಮ ಜಾರಿಗೆ ತರಲಾಗುತ್ತಿದೆ ಎಂದು ಹೇಳಲಾಗಿದೆ. 80 ಕಿಮೀ/ ಗಂಟೆಕ್ಕಿಂತ ಕಡಿಮೆ ವೇಗದಲ್ಲಿ ಚಲಿಸುವ ವಾಹನಗಳು ಸರ್ವಿಸ್ ರೋಡ್ ನಲ್ಲಿ ಚಲಿಸುವಂತೆ ಸೂಚಿಸಲಾಗಿದೆ. ಸಂಚಾರ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್ ಪ್ರತಿದಿನ ಎಕ್ಸ್ ಪ್ರೆಸ್ ವೇನಲ್ಲಿ ವಾಹನ ಸಂಚಾರದ ಪರಿಶೀಲನೆ ನಡೆಸುತ್ತಿದ್ದಾರೆ. ದ್ವಿಚಕ್ರ, ತ್ರಿಚಕ್ರ ವಾಹನ ಸವಾರರು ಪ್ರತಿಭಟನೆಗೆ ಮುಂದಾದರೆ ಆಶ್ಚರ್ಯವಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ