PWD Minister Satish Jarakiholi: ಶಿರಾಡಿಘಾಟ್ನಲ್ಲಿ ಸುರಂಗ ನಿರ್ಮಾಣಕ್ಕೆ ರಾಜ್ಯದಿಂದ ಪ್ರಸ್ತಾವನೆ: ಸಚಿವ ಸತೀಶ್ ಜಾರಕಿಹೊಳಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಲಹೆ
Highways Minister Nitin Gadkari : ಶಿರಾಡಿಘಾಟ್ನಲ್ಲಿ ಸುರಂಗ ನಿರ್ಮಾಣಕ್ಕೆ ಅರಣ್ಯ ಸಮಸ್ಯೆ ಇದೆ. ಒಂದು ಎಕರೆ ಜಮೀನು ಸಹ ಸಮಸ್ಯೆ ಇರಬಾರದು ಎಂದು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ರಾಜ್ಯದಿಂದ ಸ್ಪಷ್ಟ ಪ್ರಸ್ತಾವನೆ ಬೇಕಾಗಿದೆ, ಸಿಎಂ ಜತೆ ಚರ್ಚಿಸುತ್ತೇನೆ -ಸಚಿವ ಸತೀಶ್ ಜಾರಕಿಹೊಳಿ
ನವದೆಹಲಿ: ಕೇಂದ್ರ ಹೆದ್ದಾರಿ ಸಾರಿಗೆ ಸಚಿವ (Highways Minister) ನಿತಿನ್ ಗಡ್ಕರಿ (Nitin Gadkari) ಜೊತೆಗಿನ ಸಭೆ ಬಳಿಕ ದೆಹಲಿಯಲ್ಲಿ ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ( Minister Satish Jarakiholi) ಸುದ್ದಿಗಾರರೊಂದಿಗೆ ಇಂದು ಬುಧವಾರ (ಜುಲೈ 26) ಮಾತನಾಡಿದರು. ನನೆಗುದಿಗೆ ಬಿದ್ದಿರುವ ಕಾಮಗಾರಿಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಒಪ್ಪಂದಕ್ಕೆ ಬಂದಿದ್ದೇವೆ. ಗೊಂದಲ ಇರುವ ಬಗ್ಗೆ ನಾವು ಪರಿಹಾರ ಕಂಡುಕೊಂಡಿದ್ದೇವೆ. ಸ್ಪಷ್ಟವಾದ ಪ್ರಸ್ತಾವನೆಯೊಂದಿಗೆ ದೆಹಲಿಗೆ ಮತ್ತೊಮ್ಮೆ ಬರುತ್ತೇವೆ.
ಶಿರಾಡಿಘಾಟ್ನಲ್ಲಿ ಸುರಂಗ ನಿರ್ಮಾಣಕ್ಕೆ ಅರಣ್ಯ ಸಮಸ್ಯೆ ಇದೆ. ಒಂದು ಎಕರೆ ಜಮೀನು ಸಹ ಸಮಸ್ಯೆ ಇರಬಾರದು ಎಂದು ಹೇಳಿದ್ದಾರೆ. ರಾಜ್ಯದಿಂದ ಸ್ಪಷ್ಟ ಪ್ರಸ್ತಾವನೆ ಬೇಕಾಗಿದೆ, ಸಿಎಂ ಜತೆ ಚರ್ಚಿಸುತ್ತೇನೆ. 38 ರಾಷ್ಟ್ರೀಯ ಹೆದ್ದಾರಿಗಳು ಅಪ್ಗ್ರೇಡ್ ಆಗಬೇಕಿದೆ. ಕೇಂದ್ರ ಹೆದ್ದಾರಿ ಸಚಿವ ಗಡ್ಕರಿ ಜತೆ 20 ವಿಷಯಗಳ ಬಗ್ಗೆ ಚರ್ಚೆ ನಡೆದಿದೆ. ಬೆಂಗಳೂರಿನಲ್ಲಿ ಸುರಂಗ ನಿರ್ಮಿಸುವ ಬಗ್ಗೆ ಆಸಕ್ತಿ ವಹಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಪತ್ರ ಕೂಡ ಬರೆದಿದ್ದಾರೆ. ಅಂತಿಮವಾದ ಪ್ರಸ್ತಾವನೆ ಮುಂದಿನ ದಿನಗಳಲ್ಲಿ ಇಡಲಿದ್ದೇವೆ. ಯಾರು ಹಣ ಹೂಡಿಕೆ ಮಾಡಬೇಕೆಂದು ನಿರ್ಧಾರ ಮಾಡಬೇಕು ಎಂದು ಸತೀಶ್ ತಿಳಿಸಿದ್ದಾರೆ.