ಮಳೆಯಿಂದ KR ಸರ್ಕಲ್ ಅಂಡರ್‌ಪಾಸ್‌ನಲ್ಲಿ ಕಾರು ಸಿಲುಕಿ ಟೆಕ್ಕಿ ಸಾವು: ದುರಂತದ ಬಗ್ಗೆ ಬಾಯ್ಬಿಟ್ಟ ಕಾರು ಡ್ರೈವರ್

Updated on: May 22, 2023 | 8:38 AM

ನಿನ್ನೆ ಮಧ್ಯಾಹ್ನ ಮಳೆ ಹೊತ್ತಲ್ಲೇ ಇಸ್ಕಾನ್​ನಿಂದ ಕಾರಿನಲ್ಲಿ ಹೊರಟಿದ್ದ ಕುಟುಂಬ ಕೆ.ಆರ್.ಸರ್ಕಲ್ ಬಳಿಯ ಅಂಡರ್​ಪಾಸ್ ಮೂಲಕ ತೆರಳಲು ಮುಂದಾಗಿತ್ತು. ಆದ್ರೆ, ಅಂಡರ್ ಪಾಸ್​ನಲ್ಲಿ ವರುಣನ ಕಡುಕೋಪ, ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾಳೆ. ಇನ್ನು ಈ ದುರಂತದ ಬಗ್ಗೆ ಕಾರು ಡ್ರೈವರ್​ ಬಾಯ್ಬಿಟ್ಟಿದ್ದಾನೆ.

ಬೆಂಗಳೂರು:  ಬೆಂಗಳೂರಿನಲ್ಲಿ ನಿನ್ನೆ ಸುರಿದ ಮಳೆಗೆ ಒಂದು ಜೀವ ಬಲಿಯಾಗಿದೆ. ಯಾರದ್ದೋ ನಿರ್ಲಕ್ಷ್ಯಕ್ಕೆ ಇನ್ಯಾರೋ ಜೀವ ತೆತ್ತಿದ್ದಾರೆ. ಕುಟುಂಬ ಸಮೇತ ಬೆಂಗಳೂರು ನೋಡ್ಬೇಕು ಅಂತ ಆಸೆಯಿಂದ ಬಂದವರ ಬಾಳಲ್ಲಿ ಎಂದೂ ಮರೆಯಲಾಗದ ಘೋರ ದುರಂತವೇ ನಡೆದು ಹೋಗಿದೆ. ಫ್ಯಾಮಿಲಿ ಸಮೇತ ಬೆಂಗಳೂರು ನೋಡಲು ಬಂದ ಯುವತಿ ದುರಂತ ಅಂತ್ಯ ಕಂಡಿದ್ದಾಳೆ. ಆಂಧ್ರ ಮೂಲದ ಭಾನುರೇಖಾ, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ಲು. ನಿನ್ನೆ ಮಧ್ಯಾಹ್ನ ಮಳೆ ಹೊತ್ತಲ್ಲೇ ಇಸ್ಕಾನ್​ನಿಂದ ಕಾರಿನಲ್ಲಿ ಹೊರಟಿದ್ದ ಕುಟುಂಬ ಕೆ.ಆರ್.ಸರ್ಕಲ್ ಬಳಿಯ ಅಂಡರ್​ಪಾಸ್ ಮೂಲಕ ತೆರಳಲು ಮುಂದಾಗಿತ್ತು. ಆದ್ರೆ, ಅಂಡರ್ ಪಾಸ್​ನಲ್ಲಿ ವರುಣನ ಕಡುಕೋಪ, ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾಳೆ. ಇನ್ನು ಈ ದುರಂತದ ಬಗ್ಗೆ ಕಾರು ಡ್ರೈವರ್​ ಬಾಯ್ಬಿಟ್ಟಿದ್ದಾನೆ.

Follow Us
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More