ಬೆಂಗಳೂರು: ಮೂರು ಗೋಡೌನ್​​ಗಳಿಗೆ ಬೆಂಕಿ; ಸ್ಥಳೀಯರ ಶಾಕಿಂಗ್ ರಿಯಾಕ್ಷನ್ ಇಲ್ಲಿದೆ

|

Updated on: Apr 07, 2024 | 9:11 AM

ಚಾಮರಾಜಪೇಟೆಯ(Chamarajapete) ಗವಿಪುರಂ ಬಳಿಯ ಟೈರ್​ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್​ ಯಾವುದೇ ಜೀವಹಾನಿ ಸಂಭವಿಸಿಲ್ಲ. ಮುಂಜಾನೆ 4 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಇನ್ನು ಟೈರ್, ಪೈಪ್ ,ಹಾಗೂ ಪ್ಲೆವುಡ್​ಗಳನ್ನು ಇರಿಸಿರುವ ಸುಮಾರು 3 ಗೋದಾಮಿಗೂ ಬೆಂಕಿ ಆವರಿಸಿದೆ.

ಬೆಂಗಳೂರು, ಏ.07: ಚಾಮರಾಜಪೇಟೆಯ(Chamarajapete) ಗವಿಪುರಂ ಬಳಿಯ ಟೈರ್​ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್​ ಯಾವುದೇ ಜೀವಹಾನಿ ಸಂಭವಿಸಿಲ್ಲ. ಮುಂಜಾನೆ 4 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಇನ್ನು ಟೈರ್, ಪೈಪ್ ,ಹಾಗೂ ಪ್ಲೆವುಡ್​ಗಳನ್ನು ಇರಿಸಿರುವ ಸುಮಾರು 3 ಗೋದಾಮಿಗೂ ಬೆಂಕಿ ಆವರಿಸಿದೆ. ಸದ್ಯ ಸಿವಿಲ್ ಡಿಫೆನ್ಸ್ ಹಾಗೂ ಸ್ಥಳೀಯರ ಜೊತೆಗೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುತ್ತಿದ್ದಾರೆ. ಇನ್ನು  ರಾಜೇಶ್ ಅಗರ್ವಾಲ್ ಮಾಲೀಕತ್ವದ ಗೋಡೌನ್ ಆಗಿದ್ದು, ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ತಗುಲಿರುವ ಸಾಧ್ಯತೆಯಿದೆ. 15 ಸಾವಿರಕ್ಕು ಅಧಿಕ ಟೈರ್ ಗೋಡೌನ್​ನಲ್ಲಿತ್ತು. 60 ಸಾವಿರಕ್ಕೂ ಹೆಚ್ಚು ಟ್ಯೂಬ್,ಮತ್ತು ಆಯಿಲ್ ಬೆಂಕಿಗಾಹುತಿ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ

Published On - 9:08 am, Sun, 7 April 24

Follow us on