Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್​​ನ ದ್ವಾರಕಾದಲ್ಲಿ ಶಾರ್ಟ್​ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ; 7 ತಿಂಗಳ ಮಗು ಸೇರಿ ನಾಲ್ವರು ಸಜೀವದಹನ

ಮುಂಜಾನೆ 3-4ಗಂಟೆ ವೇಳೆ ಗುಜರಾತ್​​ನ ದ್ವಾರಕಾದಲ್ಲಿ ಶಾರ್ಟ್​ಸರ್ಕ್ಯೂಟ್​ನಿಂದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದಟ್ಟ ಹೊಗೆ ಆವರಿಸಿ ಉಸಿರಾಡಲು ಆಗದೆ ಮನೆಯಲ್ಲಿದ್ದ ಪತಿ-ಪತ್ನಿ, 7 ತಿಂಗಳ ಮಗು, ಅಜ್ಜಿ ಸಜೀವದಹನ ಆಗಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಗುಜರಾತ್​​ನ ದ್ವಾರಕಾದಲ್ಲಿ ಶಾರ್ಟ್​ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ; 7 ತಿಂಗಳ ಮಗು ಸೇರಿ ನಾಲ್ವರು ಸಜೀವದಹನ
ಗುಜರಾತ್​​ನ ದ್ವಾರಕಾದಲ್ಲಿ ಅಗ್ನಿ ದುರಂತ; 7 ತಿಂಗಳ ಮಗು ಸೇರಿ ನಾಲ್ವರ ಸಾವು
Follow us
ಆಯೇಷಾ ಬಾನು
|

Updated on:Mar 31, 2024 | 10:25 AM

ದ್ವಾರಕಾ, ಮಾರ್ಚ್​.31: ಗುಜರಾತ್‌ನ ದ್ವಾರಕಾದಲ್ಲಿ ಅಗ್ನಿ ದುರಂತ (Fire Accident) ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ಹತ್ತಿಕೊಂಡಿದ್ದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ (Death). ಏಳು ತಿಂಗಳ ಹೆಣ್ಣು ಮಗು, ಪತಿ-ಪತ್ನಿ ಹಾಗೂ ಅಜ್ಜಿ ಸೇರಿ ನಾಲ್ವರು ಸಜೀವದಹನವಾಗಿದ್ದಾರೆ. ಬೆಳಗಿನ ಜಾವ 3ರಿಂದ 4ಗಂಟೆಯ ನಡುವೆ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ತಗುಲಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಬೆಂಕಿಯಿಂದ ದಟ್ಟ ಹೊಗೆ ಆವರಿಸಿದ್ದರಿಂದ ಮನೆಯಲ್ಲಿದ್ದವರು ಉಸಿರುಗಟ್ಟಿ ಬೆಂಕಿಯಲ್ಲೇ ಸಜೀವದಹನವಾಗಿದ್ದಾರೆ.

ಮೃತರನ್ನು ಪವನ್ ಕಮಲೇಶ್ ಉಪಾಧ್ಯಾಯ (30 ವರ್ಷ), ಭಾವನ ಉಪಾಧ್ಯಾಯ (27 ವರ್ಷ), ಧ್ಯಾನಾ ಉಪಾಧ್ಯಾಯ (7 ತಿಂಗಳ ಬಾಲಕಿ) ಮತ್ತು ಪವನ್ ಅವರ ತಾಯಿ ಭಾಮಿನಿಬೆನ್ ಉಪಾಧ್ಯಾಯ ಎಂದು ಗುರುತಿಸಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: ವೈದ್ಯಕೀಯ ಲೋಕದ ಅಚ್ಚರಿ, ವ್ಯಕ್ತಿಯೊಬ್ಬರಿಗೆ ಕೃತಕ ಹೃದಯ ಅಳವಡಿಕೆ!

ಹಲೀಂ ತಿಂದು ಕಾಸು ಕೊಡದ್ದಕ್ಕೆ ಭಾರಿ ಮಾರಾಮಾರಿ

ಹಲೀಂ ತಿಂದು ಕಾಸು ಕೊಡದ ಕಾರಣ ಭಾರಿ ಮಾರಾಮಾರಿಯೇ ನಡೆದಿದೆ. ಮುಶಿರಾಬಾದ್​ನಲ್ಲಿ ಎರಡು ಮುಸ್ಲಿಂ ಗುಂಪುಗಳ ನಡುವೆ ಹೊಡೆದಾಟ ನಡೆದಿರುವ ವಿಡಿಯೋ ವೈರಲ್ ಆಗಿದೆ. ರಂಜಾನ್​ ಹಬ್ಬದ ಪ್ರಯುಕ್ತ ಹೈದರಾಬಾದ್​ನಲ್ಲಿ ಹಲೀಂ ಖಾದ್ಯ ತುಂಬಾ ಫೇಮಸ್ ಆಗಿದೆ. ಆದ್ರೆ ಮುಶಿರಾಬಾದ್​ನ ರೆಸ್ಟೋರೆಂಟ್​ನಲ್ಲಿ ಹಲೀಂ ತಿಂದು ಹಣ ಕೊಡಲಿಲ್ವಂತೆ. ಇದರಿಂದ ಶುರುವಾದ ಜಗಳ ಬೀದಿಗೆ ಬಂದು ಹೊಡೆದಾಡಿಕೊಂಡಿದ್ದಾರೆ.

ಆನ್​ಲೈನ್​ನಿಂದ ತರಿಸಿದ್ದ ಕೇಕ್​ ತಿಂದು ಸಾವು

10ನೇ ವರ್ಷದ ಹುಟ್ಟುಹಬ್ಬ ದ ಖುಷಿಯಲ್ಲಿದ್ದ ಬಾಲಕಿಯೊಬ್ಬಳು ಅದೇ ದಿನ ಕೇಕ್​ ತಿಂದು ಮೃತಪಟ್ಟಿದ್ದಾಳೆ. ಪಂಜಾಬ್​ನ ಪಟಿಯಾಲಾದಲ್ಲಿ ಘಟನೆ ನಡೆದಿದ್ದು, 10 ವರ್ಷದ ಬಾಲಕಿ ಮಾನ್ವಿ ಮೃತಪಟ್ಟಿದ್ದಾಳೆ. ಕಳೆದ ಮಾರ್ಚ್ 24ರಂದು ಆನ್​ಲೈನ್​ನಲ್ಲಿ ಕೇಕ್​ ಆರ್ಡರ್​ ಮಾಡಿ ಹುಟ್ಟುಹಬ್ಬ ಆಚರಿಸಿ ಮಲಗಿದ್ರು. ಬಳಿಕ ತಡರಾತ್ರಿ ಇಡೀ ಮನೆಯವರು ಅಸ್ವಸ್ಥಗೊಂಡಿದ್ರು. ಮಾರನೇ ದಿನ ಮಾನ್ವಿ ಮೃತಪಟ್ಟಿದ್ದಾಳೆ.

ಮತ್ತಷ್ಟು ರಾಷ್ರೀಯ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಕಿಕ್ ಮಾಡಿ

Published On - 9:19 am, Sun, 31 March 24