ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಗೋದಾಮಿನಲ್ಲಿ ಬೆಂಕಿ ಅವಘಡ: 30 ರಿಂದ 40 ವಾಹನಗಳು ಬೆಂಕಿಗಾಹುತಿ
ಬೆಂಗಳೂರಿನ ನಾಯಂಡಹಳ್ಳಿ ಸಮೀಪದ ಗಂಗೊಂಡನಹಳ್ಳಿ ಬಳಿ ತಡರಾತ್ರಿ ಪ್ಲಾಸ್ಟಿಕ್ ಗೋದಾಮು ಶೆಡ್ನಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ 30 ರಿಂದ 40 ವಾಹನಗಳು ಬೆಂಕಿಗಾಹುತಿ ಆಗಿರುವಂತಹ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಬೆಂಗಳೂರು, ಫೆಬ್ರವರಿ 23: ನಗರದಲ್ಲಿ ಪ್ಲಾಸ್ಟಿಕ್ ಗೋದಾಮು ಶೆಡ್ನಲ್ಲಿ ಬೆಂಕಿ (fire) ಅವಘಡ ಸಂಭವಿಸಿದ ಪರಿಣಾಮ 30 ರಿಂದ 40 ವಾಹನಗಳು ಬೆಂಕಿಗಾಹುತಿ ಆಗಿರುವಂತಹ ಘಟನೆ ನಾಯಂಡಹಳ್ಳಿ ಸಮೀಪದ ಗಂಗೊಂಡನಹಳ್ಳಿ ಬಳಿ ತಡರಾತ್ರಿ ನಡೆದಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ರಿಜ್ವಾನ್ ಎಂಬುವವರಿಗೆ ಸೇರಿದ ಪಾರ್ಕಿಂಗ್ ಜಾಗ ಇದಾಗಿದ್ದು, ಬಾಡಿಗೆಗೆ ಪಡೆದು ಪಾರ್ಕಿಂಗ್ ನಡೆಸುತ್ತಿದ್ದರು. ಘಟನೆ ಬಳಿಕ ಗೋಡೌನ್ ಬಳಿ ಬಂದು ಕಣ್ಣೀರು ಹಾಕಿದ್ದಾರೆ. ಪ್ರತಿ ದಿನ ವಾಹನಕ್ಕೆ 30 ರೂಪಾಯಿ ಚಾರ್ಜ್ ಮಾಡುತ್ತಿದ್ದರು. ಪಾರ್ಕಿಂಗ್ ಸ್ಥಳದ ಪಕ್ಕದಲ್ಲೇ ಪ್ಲಾಸ್ಟಿಕ್ ಗೋಡೌನ್ ಕೂಡ ಇತ್ತು.
ಆಟೋ ಓಡಿಸುವುದು, ಬಟ್ಟೆ ಸೇರಿದಂತೆ ಹಲವು ವ್ಯಾಪಾರ ಮಾಡುತ್ತಿದ್ದರು. ರಾತ್ರಿ ತಂದು ವಾಹನ ಪಾರ್ಕ್ ಮಾಡಿ ಹೋಗುತ್ತಿದ್ದರು. ಸದ್ಯ ಆಟೋ ಜೊತೆಗೆ ವಸ್ತುಗಳು ಸುಟ್ಟು ಕರಕಲಾಗಿದ್ದು, ನಮ್ಮ ಜೀವನ ಮುಂದೆ ಹೇಗೆ? ಇದನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದೆವು ಎಂದು ಅಳಲು ತೊಡಿಕೊಂಡಿದ್ದಾರೆ.
ಕಾರ್ ಶೋ ರೂಂಗೆ ಬೆಂಕಿ: ಅಂದಾಜು 2 ಕೋಟಿ ರೂ. ನಷ್ಟ
ಶಿವಮೊಗ್ಗ: ನಗರದಲ್ಲಿ ಮತ್ತೊಂದು ಅಗ್ನಿಅವಢಗ ಸಂಭವಿಸಿತ್ತು. ಒಂದು ವರ್ಷದ ಹಿಂದೆಯಷ್ಟೇ ಮನೆಗೆ ಆಕಸ್ಮಿಕ ಬೆಂಕಿಬಿದ್ದು ಉದ್ಯಮಿಯೊಬ್ಬರು ಬಲಿಯಾಗಿದ್ದರು. ಇದರ ಬೆನ್ನಲ್ಲೇ ಶಿವಮೊಗ್ಗದ ಪ್ರತಿಷ್ಠಿತ ಕಾರ್ ಶೋ ರೂಂ ಗೆ ಬೆಂಕಿ ಬಿದ್ದು ಕೋಟಿ ಕೋಟಿಗೂ ಅಧಿಕ ಕಾರ್ ಗಳು ಬೆಂಕಿಗೆ ಆಹುತಿಯಾಗಿದ್ದವು. ರಾತ್ರಿ ಸುಮಾರು 9.30 ಆಸುಪಾಸಿನಲ್ಲಿ ನಗರದ ಶಂಕರ ಮಠದ ರಸ್ತೆಯ ರಾಹುಲ್ ಹುಂಡೈ ಕಾರ್ ಶೋ ರೂಂನಲ್ಲಿ ಆಕಸ್ಮಿಕ ಬೆಂಕಿ ಕಂಡು ಬಂದಿತ್ತು. ನೋಡು ನೋಡುತ್ತಿದ್ದಂತೆ ಶೋಂ ನಲ್ಲಿ ಗ್ರಾಹಕರಗೆ ನೋಡಲು ಇಟ್ಟಿದ್ದ ಒಳಗೆ ಎರಡು ಕಾರ್ ಗಳು ಬೆಂಕಿಗೆ ಆಹುತಿಯಾಗಿದ್ದವು.
ಇದನ್ನೂ ಓದಿ: ಸುಗಂಧ ದ್ರವ್ಯ ಕಾರ್ಖಾನೆಯಲ್ಲಿ ಸ್ಫೋಟ ಪ್ರಕರಣ; ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ
ಪಕ್ಕದಲ್ಲಿ ಟಾಟಾ ಕಾರ್ ಶೋ ರೂಂ ಇದೆ. ಹುಂಡೈ ಶೋರೂಂ ಹತ್ತಿದ ಬೆಂಕಿಯು ಪಕ್ಕದ ಟಾಟಾ ಶೋ ಆವರಣದಲ್ಲಿ ನಿಲ್ಲಿಸಿದ್ದ ಸುಮಾರು ನಾಲ್ಕು ಕಾರ್ಗಳು ಸುಟ್ಟು ಹೋಗಿದ್ದವು. ಶೋ ರೂಂ ನಲ್ಲಿದ್ದ ಕಾರ್ಗೆ ಸಂಬಂಧಿಸಿದ ಬಿಡಿ ಭಾಗ ಮತ್ತು ಇತರೆ ವಸ್ತುಗಳು ಸೇರಿದಂತೆ ಒಟ್ಟು ಎರಡು ಕೋಟಿಗೂ ಅಧಿಕ ನಷ್ಟವು ರಾತ್ರಿ ನಡೆದ ಬೆಂಕಿ ದುರ್ಘಟನೆಯಲ್ಲಿ ಸಂಭವಿಸಿತ್ತು.
ಇದನ್ನೂ ಓದಿ: ಬೆಂಗಳೂರಿನ ಸುಮನಹಳ್ಳಿ ಚಿತಾಗಾರ 10 ದಿನಗಳ ಕಾಲ ಬಂದ್
ಸುಮಾರು ಮೂರು ಘಂಟೆಗೂ ಅಧಿಕಕಾಲ ಆಗ್ನಿಶಾಮಕ ಸಿಬ್ಬಂದಿ ಮತ್ತು ಅಧಿಕಾರಿಗಳು ಮೂರು ನಾಲ್ಕು ಅಗ್ನಿಶಾಮಕ ನಿರಂತರವಾಗಿ ಬಳಕೆ ಮಾಡಿಕೊಂಡು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಹುಂಡೈ ಶೋರೂಂ ನಲ್ಲಿದ್ದ ಕಾರ್ ಮತ್ತು ಭಿಡಿ ಭಾಗಗಳು ಸುಟ್ಟು ಭಸ್ಮವಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:08 am, Fri, 23 February 24