ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ನಯಾ ಪ್ಲ್ಯಾನ್: ಏನದು?
ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪೊಲೀಸರು ಹೊಸ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಟಾಮ್‌ಟಾಮ್ ವರದಿಯ ಪ್ರಕಾರ ಟ್ರಾಫಿಕ್‌ನಲ್ಲಿ ಬೆಂಗಳೂರು ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಕೆ.ಆರ್. ಪುರಂ - ಇಬ್ಬಲೂರು ಮಾರ್ಗದಲ್ಲಿನ ಕಂಪನಿಗಳ ಉದ್ಯೋಗಿಗಳು, ಡೆಲಿವರಿ ವಾಹನಗಳು ಮತ್ತು ರಸ್ತೆ ಅಗೆತದ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ, ಸಾರ್ವಜನಿಕ ಸಾರಿಗೆ ಉತ್ತೇಜನಕ್ಕೆ ಒತ್ತು ನೀಡಲಾಗುತ್ತಿದೆ.
ಬೆಂಗಳೂರು, ಜನವರಿ 24: ವಿಶ್ವದ ಅತಿ ಹೆಚ್ಚು ಟ್ರಾಫಿಕ್ ಹೊಂದಿರುವ ನಗರಗಳಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ ಎಂಬ ಟಾಮ್‌ಟಾಮ್ ವರದಿ ಬೆನ್ನಲ್ಲೇ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ಪೊಲೀಸರು ಹೊಸ ಪ್ಲ್ಯಾನ್ಗೆ ಮುಂದಾಗಿದ್ದಾರೆ. ಪ್ರಮುಖವಾಗಿ ಕೆ.ಆರ್. ಪುರಂನಿಂದ ಇಬ್ಬಲೂರುವರೆಗಿನ 17 ಕಿ.ಮೀ ವ್ಯಾಪ್ತಿಯಲ್ಲಿರುವ ಸುಮಾರು 500 ಕಂಪನಿಗಳಲ್ಲಿ ಕೆಲಸ ಮಾಡುವ 12 ಲಕ್ಷ ಉದ್ಯೋಗಿಗಳ ಓಡಾಟವನ್ನು ಸಾರ್ವಜನಿಕ ಸಾರಿಗೆಯತ್ತ ತಿರುಗಿಸುವ ಕುರಿತು ಸಭೆ ನಡೆದಿದೆ. ಅಲ್ಲದೆ, ಪೀಕ್ ಅವರ್‌ನಲ್ಲಿ ಓಡಾಡುವ ಸುಮಾರು 35-40 ಸಾವಿರ ಡೆಲಿವರಿ ವಾಹನಗಳಿಗಾಗಿ ಪರ್ಯಾಯ ಮಾರ್ಗಗಳನ್ನು ಗುರುತಿಸಲು ಗೂಗಲ್ ಜೊತೆ ಚರ್ಚಿಸುವ ಆಲೋಚನೆಯೂ ಇದೆ. ರಸ್ತೆ ಅಗೆತದಂತಹ ಮೂಲಭೂತ ಸಮಸ್ಯೆಗಳ ಮೇಲೂ ಗಮನ ಹರಿಸಲು ಸಂಚಾರ ವಿಭಾಗ ಮುಂದಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
