ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ಶಾಸ್ತ್ರದ ವಿವರಣೆ ಇಲ್ಲಿದೆ
ಅಡುಗೆಮನೆಯನ್ನು ಯಾವ ದಿಕ್ಕಿನಲ್ಲಿ ನಿರ್ಮಿಸುವುದು ಶುಭ ಎಂಬುದರ ಕುರಿತು ಈ ವಿಡಿಯೋದಲ್ಲಿ ಡಾ. ಬಸವರಾಜ್ ಗುರೂಜಿ ತಿಳಿಸಿದ್ದಾರೆ. ವಾಸ್ತು ಶಾಸ್ತ್ರದ ಪ್ರಕಾರ, ಪೂರ್ವಾಗ್ನೇಯ ದಿಕ್ಕು ಅಡುಗೆಮನೆಗೆ ಅತ್ಯುತ್ತಮವಾಗಿದೆ. ಉತ್ತರ ವಾಯುವ್ಯವು ಎರಡನೇ ಆಯ್ಕೆಯಾಗಿದೆ. ಈಶಾನ್ಯ ಮತ್ತು ನೈಋತ್ಯ ದಿಕ್ಕುಗಳಲ್ಲಿ ಅಡುಗೆಮನೆ ನಿರ್ಮಿಸಬಾರದು ಎಂದು ಅವರು ವಿವರಿಸಿದ್ದಾರೆ.
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿ ಇದ್ದರೆ ಶುಭ ಎಂಬ ಬಗ್ಗೆ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ವಾಸ್ತುಶಾಸ್ತ್ರದ ಪ್ರಕಾರ, ಮನೆಯಲ್ಲಿ ಅಡುಗೆಮನೆ ನಿರ್ಮಿಸುವಾಗ ದಿಕ್ಕು ಬಹಳ ಮುಖ್ಯ. ಅತ್ಯಂತ ಶುಭ ದಿಕ್ಕು ಪೂರ್ವಾಗ್ನೇಯ (ಪೂರ್ವ ಮತ್ತು ದಕ್ಷಿಣದ ನಡುವಿನ ಮೂಲೆ). ಈ ದಿಕ್ಕಿನಲ್ಲಿ ಅಡುಗೆಮನೆಯನ್ನು ನಿರ್ಮಿಸಿದರೆ ಆರೋಗ್ಯ, ಐಶ್ವರ್ಯ ಮತ್ತು ಮಾನಸಿಕ ಸದೃಢತೆ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ. ಎರಡನೇ ಆಯ್ಕೆಯಾಗಿ ಉತ್ತರ ವಾಯುವ್ಯ ದಿಕ್ಕನ್ನು ಆಯ್ಕೆ ಮಾಡಬಹುದು. ಆದರೆ ಈಶಾನ್ಯ ಮತ್ತು ನೈಋತ್ಯ ದಿಕ್ಕುಗಳನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಅವರು ವಿವರಿಸಿದ್ದಾರೆ. ಹೆಚ್ಚಿನ ವಿವರ ವಿಡಿಯೋದಲ್ಲಿದೆ.
