ಕೆಎಸ್​ ಈಶ್ವರಪ್ಪ ಜೊತೆ ಶಿವರಾಜ್​ಕುಮಾರ್​ ನಡೆಸಿದ ಮಾತುಕತೆ ಏನು? ಇಲ್ಲಿದೆ ವಿಡಿಯೋ

Edited By:

Updated on: Jul 30, 2021 | 5:02 PM

ಶಿವರಾಜ್​ಕುಮಾರ್​ ಅವರು ಈವರೆಗೂ ನೇರವಾಗಿ ರಾಜಕೀಯಕ್ಕೆ ಎಂಟ್ರಿ ನೀಡಿದವರಲ್ಲ. ಆದರೆ ಅವರ ಕುಟುಂಬಕ್ಕೂ ರಾಜಕೀಯಕ್ಕೂ ನಂಟು ಮೊದಲಿನಿಂದಲೂ ಇದೆ.

ಸ್ಯಾಂಡಲ್​ವುಡ್​ನ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ (Shivarajkumar) ಮತ್ತು ಮಾಜಿ ಸಚಿವ ಕೆಎಸ್​ ಈಶ್ವರಪ್ಪ (KS Eshwarappa) ಅವರು ಮೈಸೂರಿನಲ್ಲಿ ಭೇಟಿ ಆಗಿದ್ದಾರೆ. ಇದೊಂದು ಸಹಜ ಭೇಟಿಯಾಗಿದ್ದು, ಇದಕ್ಕೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ಇಂದು (ಜು.30) ಆಷಾಢ ಶುಕ್ರವಾರವಾದ ಕಾರಣ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸುವ ಸಲುವಾಗಿ ಈಶ್ವರಪ್ಪ ಬಂದಿದ್ದಾರೆ. ಬಳಿಕ ಉಪಾಹಾರಕ್ಕಾಗಿ ಖಾಸಗಿ ಹೋಟೆಲ್​ಗೆ ಅವರು ತೆರಳಿದರು. ಇದೇ ವೇಳೆ ಆ ಹೋಟೆಲ್​ನಲ್ಲಿದ್ದ ಶಿವರಾಜ್​ಕುಮಾರ್​ ಅವರನ್ನು ಈಶ್ವರಪ್ಪ ಭೇಟಿಯಾದರು.

ಶಿವರಾಜ್​ಕುಮಾರ್​ ಮತ್ತು ಈಶ್ವರಪ್ಪ ಅವರು ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ಶಿವರಾಜ್​ಕುಮಾರ್​ ಅವರ ಫಿಟ್​ನೆಸ್​ಗೆ ಈಶ್ವರಪ್ಪ ಮೆಚ್ಚುಗೆ ಸೂಚಿಸಿದ್ದಾರೆ. ಹೋಟೆಲ್​ನಲ್ಲಿದ್ದ ಅಭಿಮಾನಿಗಳು ಇಬ್ಬರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ಡಾ. ರಾಜ್​ಕುಮಾರ್​ ಅವರ ತಂಗಿ (ನಾಗತ್ತೆ) ಅವರನ್ನು ನೋಡಿಕೊಂಡು ಬರಲು ಶಿವರಾಜ್​ಕುಮಾರ್​ ಗಾಜನೂರಿನತ್ತ ಪ್ರಯಾಣ ಬೆಳೆಸಿದ್ದರು.

ಇದನ್ನೂ ಓದಿ:

ಗ್ಲೆನ್​ ಮ್ಯಾಕ್ಸ್​​ವೆಲ್​​ಗೆ ಗೊತ್ತು ಸೆಂಚುರಿ ಸ್ಟಾರ್​ ಶಿವರಾಜ್​ಕುಮಾರ್​; ಶಿವಣ್ಣನ ಬಗ್ಗೆ ಮ್ಯಾಕ್ಸಿ ಹೇಳಿದ್ದೇನು?

ಕಷ್ಟಕಾಲದಲ್ಲಿ ಸಿನಿಮಾ ಕಾರ್ಮಿಕರ ಕೈ ಹಿಡಿದ ಶಿವರಾಜ್​ಕುಮಾರ್​; 10 ಲಕ್ಷ ರೂ. ನೆರವು

Published on: Jul 30, 2021 04:32 PM
Loading...
Unable to load recommendations.
Follow Us
TV9 Web

TV9 Kannada

Read More