Jammu and Kashmir: ಶ್ರೀನಗರದಿಂದ ಡಿಕೆ ಶಿವಕುಮಾರ್ ವಿಡಿಯೋ ಬಿಡುಗಡೆ
ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ಯಾತ್ರೆ ಜಮ್ಮು-ಕಾಶ್ಮೀರ ತಲುಪಿದ್ದು, ಶ್ರೀನಗರದಲ್ಲಿಂದು (ಜ.30) ಸಮಾರೋಪ ಸಮಾರಂಭವಿದೆ. ಈ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಶ್ರೀನಗರಕ್ಕೆ ತೆರಳಿದ್ದಾರೆ.
ಬೆಂಗಳೂರು: ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ಯಾತ್ರೆ ಜಮ್ಮು-ಕಾಶ್ಮೀರ ತಲುಪಿದ್ದು, ಶ್ರೀನಗರದಲ್ಲಿಂದು (ಜ.30) ಸಮಾರೋಪ ಸಮಾರಂಭವಿದೆ. ಈ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಶ್ರೀನಗರಕ್ಕೆ ತೆರಳಿದ್ದಾರೆ. ಡಿಕೆ ಶಿವಕುಮಾರ್ ಜಮ್ಮು-ಕಾಶ್ಮೀರದ ಶ್ರೀನಗರದ ಪ್ರಕೃತಿ ಸೌಂದರ್ಯದ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದಾರೆ. ವಿಡಿಯೋದಲ್ಲಿ ಜೋಡೋ ಯಾತ್ರೆಯಲ್ಲಿ ಭಾಗಿಯಾಗಲು ಶ್ರೀನಗರಕ್ಕೆ ಬಂದಿದ್ದೇನೆ. ಇದು ನನ್ನ ಜೀವನದಲ್ಲೇ ಅತಿ ದೊಡ್ಡ ಸಂತಸ ಸಂಗತಿಯಾಗಿದೆ. ಜಮ್ಮು-ಕಾಶ್ಮೀರದಲ್ಲಿ ಮಳೆ ಬಿದ್ದ ರೀತಿಯಲ್ಲಿ ಹಿಮ ಬೀಳುತ್ತಿದೆ. ಇಂತಹ ಅದ್ಭುತ ದೃಶ್ಯವನ್ನು ನನ್ನ ಜೀವನದಲ್ಲಿ ನೋಡಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.