‘ಅಯೋಗ್ಯ 2’ ಸಿನಿಮಾದ ಹೊಸ ಹಾಡಿನಲ್ಲಿ ಸತೀಶ್ ನೀನಾಸಂ ಮಾಸ್ ಅವತಾರ

Updated on: Jul 08, 2026 | 10:31 PM

ಮುಖ್ಯಾಂಶಗಳು

  • ‘ಅಯೋಗ್ಯ 2’ ಸಿನಿಮಾದ ‘ಅಣ್ಣ ಬಂದ್ರೆ..’ ಹಾಡು ಬಿಡುಗಡೆ.
  • ಮಾಸ್ ಗೆಟಪ್ ಧರಿಸಿ ಸ್ಟೆಪ್ಸ್ ಹಾಕಿದ್ದಾರೆ ನಟ ಸತೀಶ್ ನೀನಾಸಂ.
  • ಈ ಹಾಡಿನ ಬಗ್ಗೆ ವೇದಿಕೆಯಲ್ಲಿ ಮಾತನಾಡಿದ ಚೇತನ್ ಕುಮಾರ್.

‘ಅಯೋಗ್ಯ 2’ ಚಿತ್ರದ ‘ಅಣ್ಣ ಬಂದ್ರೆ..’ ಹಾಡು ಬಿಡುಗಡೆ ಆಗಿದೆ. ಆ್ಯಂಟನಿ ದಾಸನ್ ಅವರು ಈ ಗೀತೆಗೆ ಧ್ವನಿ ನೀಡಿದ್ದಾರೆ. ಚೇತನ್ ಕುಮಾರ್ ಅವರು ಸಾಹಿತ್ಯ ಬರೆದಿದ್ದಾರೆ. ಈ ಹಾಡಿನಲ್ಲಿ ಸತೀಶ್ ಅವರು ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಚೇತನ್ ಕುಮಾರ್ ಮಾತನಾಡಿದ್ದಾರೆ.

ಸತೀಶ್ ನೀನಾಸಂ ನಟನೆಯ ‘ಅಯೋಗ್ಯ 2’ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ‘ಅಯೋಗ್ಯ’ ರೀತಿಯೇ ‘ಅಯೋಗ್ಯ 2’ ಚಿತ್ರದ ಹಾಡುಗಳು ಕೂಡ ಗಮನ ಸೆಳೆಯುತ್ತಿವೆ. ಮಹೇಶ್ ಕುಮಾರ್ ನಿರ್ದೇಶನದ ಈ ಸಿನಿಮಾಗೆ ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ. ‘ಅಣ್ಣ ಬಂದ್ರೆ..’ ಹಾಡನ್ನು ಈಗ ರಿಲೀಸ್ ಮಾಡಲಾಗಿದೆ. ಈ ಹಾಡಿಗೆ ಆ್ಯಂಟನಿ ದಾಸನ್ ಅವರು ಧ್ವನಿ ನೀಡಿದ್ದಾರೆ. ಚೇತನ್ ಕುಮಾರ್ ಅವರು ಸಾಹಿತ್ಯ ಬರೆದಿದ್ದಾರೆ. ಈ ಹಾಡಿನಲ್ಲಿ ಸತೀಶ್ ನೀನಾಸಂ (Sathish Ninasam) ಅವರು ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಚೇತನ್ ಕುಮಾರ್ ಅವರು ಮಾತನಾಡಿದ್ದಾರೆ. ಸತೀಶ್ ಅವರನ್ನು ಈ ರೀತಿ ಮಾಸ್ ಅವತಾರದಲ್ಲಿ ನೋಡಬೇಕು ಎಂಬುದು ಅಭಿಮಾನಿಗಳ ಆಸೆ ಆಗಿತ್ತು. ಅದು ‘ಅಯೋಗ್ಯ 2’ ಸಿನಿಮಾದ ಈ ಹಾಡಿನ ಮೂಲಕ ಈಡೇರಿದೆ ಎಂದು ಚೇತನ್ ಕುಮಾರ್ ಅವರು ಹೇಳಿದ್ದಾರೆ. ಆಗಸ್ಟ್ 7ರಂದು ಈ ಸಿನಿಮಾ ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More