ಹೆಂಡತಿ, ಮಕ್ಕಳನ್ನು ಸಾಕೋಕಾಗದೆ ಪ್ರೀತಮ್ ಗೌಡನ ಅಪ್ಪ ನಮ್ಮನೆಗೆ ಬಂದು ದಮ್ಮಯ್ಯ ಹಾಕಿದ್ರು; ಭವಾನಿ ರೇವಣ್ಣ ವಾಗ್ದಾಳಿ

Edited By:

Updated on: Nov 01, 2022 | 2:56 PM

ಮೈಸೂರಿನ ಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರೀತಮ್ ಗೌಡ ಅವರ ತಂದೆ ತಮ್ಮ ಹೆಂಡತಿ, ಮಕ್ಕಳನ್ನು ಸಾಕಲು ಆಗದೆ ರೇವಣ್ಣ ಅವರ ಬಳಿ ಬಂದು ಬಿಬಿಎಂಪಿ ಕೆಲಸ ಮಾಡಿಸಿಕೊಂಡಿದ್ದರು. ಆದರೆ ಅವರ ಮಗ ಇವತ್ತು ಶಾಸಕನಾಗಿ 7ನೇ ಕ್ಲಾಸ್ ಓದಿದವರು ಎಂದು ರೇವಣ್ಣನವರ ಬಗ್ಗೆ ಹಗುರವಾಗಿ ಮಾತನಾಡ್ತಾನೆ ಎಂದು ಭವಾನಿ ರೇವಣ್ಣ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ

ಈಗ ಎಲ್ಲ ಕಡೆ ಹೆಚ್​ಡಿ ರೇವಣ್ಣ 7ನೇ ಕ್ಲಾಸ್​ ಓದಿದವರು ಎಂದು ಹೇಳಿಕೊಂಡು ಓಡಾಡುತ್ತಿರುವ ಶಾಸಕ ಪ್ರೀತಮ್ ಗೌಡ ಅವರ ತಂದೆ ಅದೇ 7ನೇ ಕ್ಲಾಸ್ ರೇವಣ್ಣನವರ ಬಳಿ ಬಂದು ದಮ್ಮಯ್ಯ ಹಾಕಿ ಬಿಬಿಎಂಪಿಗೆ (BBMP) ಹಾಕಿಸಿಕೊಂಡು ಕೆಲಸ ಮಾಡಿದ್ದರು. ಮೈಸೂರಿನ ಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ ಇಂಜಿನಿಯರ್ ತಮ್ಮ ಹೆಂಡತಿ, ಮಕ್ಕಳನ್ನು ಸಾಕಲು ಆಗದೆ ರೇವಣ್ಣ (HD Revanna) ಅವರ ಬಳಿ ಬಂದು ಬಿಬಿಎಂಪಿ ಕೆಲಸ ಮಾಡಿಸಿಕೊಂಡಿದ್ದರು. ಆದರೆ ಅವರ ಮಗ ಇವತ್ತು ಶಾಸಕನಾಗಿ 7ನೇ ಕ್ಲಾಸ್ ಓದಿದವರು ಎಂದು ರೇವಣ್ಣನವರ ಬಗ್ಗೆ ಹಗುರವಾಗಿ ಮಾತನಾಡ್ತಾನೆ ಎಂದು ಶಾಸಕ ಪ್ರೀತಂಗೌಡ (Preetham gowda) ವಿರುದ್ಧ ಭವಾನಿ ರೇವಣ್ಣ (Bhavani Revanna) ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

Loading...
Unable to load recommendations.
Follow Us
TV9 Web

TV9 Kannada

Read More