ಹನುಮಂತುಗೆ ಹೊಡೆದರೂ ಭವ್ಯಾನ ಹೊರಗೆ ಹಾಕಲಿಲ್ಲ ಯಾಕೆ? ಮಂಜು ಹೇಳಿದ್ದೇನು?
Bigg Boss Kannada season 11: ಬಿಗ್ಬಾಸ್ ಕನ್ನಡ ಸೀಸನ್ 11 ಮುಕ್ತಾಯವಾಗಿದೆ. ಈ ಸೀಸನ್ನ ಆರಂಭದಲ್ಲಿಯೇ ಲಾಯರ್ ಜಗದೀಶ್ ಹಾಗೂ ರಂಜಿತ್ ಅನ್ನು ಕೈ ಕೈ ಮಿಲಾಯಿಸಿದರು ಎಂಬ ಕಾರಣಕ್ಕೆ ಮನೆಯಿಂದ ಹೊರಗೆ ಹಾಕಲಾಗಿತ್ತು. ಆದರೆ ಭವ್ಯಾ, ಹನುಮಂತುಗೆ ಹೊಡೆದರೂ ಅವರನ್ನು ಹೊರಗೆ ಹಾಕಲಿಲ್ಲ ಏಕೆಂದು ಉಗ್ರಂ ಮಂಜು ವಿವರಿಸಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 11 ಮುಗಿದಿದೆ. ಹನುಮಂತು ವಿನ್ನರ್ ಆಗಿದ್ದಾನೆ. ಇದೇ ಸೀಸನ್ನಲ್ಲಿ ಪರಸ್ಪರ ಕೈ-ಕೈ ಮಿಲಾಯಿಸಿದರು ಎಂಬ ಕಾರಣಕ್ಕೆ ಲಾಯರ್ ಜಗದೀಶ್ ಮತ್ತು ರಂಜಿತ್ ಅನ್ನು ಮೊದಲಿನಲ್ಲೇ ಮನೆಯಿಂದ ಹೊರಗೆ ಹಾಕಲಾಗಿತ್ತು. ಆದರೆ ಇದೇ ಸೀಸನ್ನ ಟಾಸ್ಕ್ ಒಂದರ ವಿಚಾರದಲ್ಲಿ ಭವ್ಯಾ ಗೌಡ, ಸ್ಪರ್ಧಿ ಹನುಮಂತು ಮೇಲೆ ಹಲ್ಲೆ ಮಾಡಿದ್ದರು. ಹನುಮಂತುಗೆ ಹೊಡೆದಿದ್ದರು ಆದರೆ ಅವರನ್ನು ಹೊರಗೆ ಹಾಕಿರಲಿಲ್ಲ. ಅದು ಏಕೆ? ಜಗದೀಶ್ಗೆ ಒಂದು ನ್ಯಾಯ, ಭವ್ಯಾಗೆ ಒಂದು ನ್ಯಾಯ ಏಕಾಯ್ತು? ಎಂಬ ಬಗ್ಗೆ ಐದನೇ ರನ್ನರ್ ಅಪ್ ಉಗ್ರಂ ಮಂಜು ಮಾತನಾಡಿದ್ದಾರೆ. ಭವ್ಯಾ ಅನ್ನು ಮನೆಯಿಂದ ಹೊರಗೆ ಹಾಕದಿರಲು ಕಾರಣ ತಿಳಿದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ