Vijayapura: ಭೀಮಾ ನದಿ ಆರ್ಭಟ; ಪ್ರವಾಹಕ್ಕೆ ಊರಿಗೆ ಊರೇ ಖಾಲಿ

Updated By: ಪ್ರಸನ್ನ ಹೆಗಡೆ

Updated on: Sep 27, 2025 | 11:44 AM

ಭೀಮಾನದಿ ಪ್ರವಾಹದಿಂದಾಗಿ ಆಲಮೇಲ ತಾಲೂಕಿನ ಕುಮಸಗಿ ಗ್ರಾಮದ 30ಕ್ಕೂ ಅಧಿಕ ಮನೆಗಳು ಸಂಪೂರ್ಣ ಜಲಾವೃತವಾಗಿವೆ. ಭೀಮಾ ತಟದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಯೂ ಪ್ರವಾಹಕ್ಕೆ ಆಹುತಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ಗಂಜಿ ಕೇಂದ್ರಗಳನ್ನ ತೆರೆದು ಆಶ್ರಯ, ಊಟೋಪಚಾರ ವ್ಯವಸ್ಥೆ ಕಲ್ಪಿಸಲಾಗಿದೆ.

ವಿಜಯಪುರ, ಸೆಪ್ಟೆಂಬರ್​ 27: ಜಿಲ್ಲೆಯಲ್ಲಿ ಭೀಮಾನದಿ ಉಕ್ಕಿ ಹರಿಯುತ್ತಿರುವ ಕಾರಣ, ಇಂಡಿಯ ಆಲಮೇಲ ತಾಲೂಕಿನಲ್ಲಿ ಪ್ರವಾಹ (Flood) ಉಂಟಾಗಿದೆ. ಕುಮಸಗಿ ಗ್ರಾಮದ 30ಕ್ಕೂ ಅಧಿಕ ಮನೆಗಳು ಸಂಪೂರ್ಣ ಜಲಾವೃತವಾಗಿದ್ದು, ಮನೆಗಳಲ್ಲಿದ್ದ ಬೆಲೆಬಾಳುವ ವಸ್ತುಗಳು ಪಡಿತರ ಸಾಮಗ್ರಿಗಳು ನೀರಲ್ಲಿ ಕೊಚ್ಚಿ ಹೋಗಿವೆ. ಜನ ಮನೆಗಳನ್ನ ಬಿಟ್ಟು ಗಂಜಿ ಕೇಂದ್ರಗಳಿಗೆ ಶಿಫ್ಟ್​ ಆಗಿದ್ದು, ಭೀಮಾ ತಟದ ನೂರಾರು ಎಕರೆ ಪ್ರದೇಶದ ಬೆಳೆ ಪ್ರವಾಹಕ್ಕೆ ಆಹುತಿಯಾಗಿದೆ. ಪ್ರತಿ ಎಕರೆಗೆ 25,000 ರೂಪಾಯಿ ಪರಿಹಾರ ಶೀಘ್ರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮತ್ತಷ್ಟು ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published on: Sep 27, 2025 11:43 AM