Video: ರೀಲ್ಸ್​ ಹುಚ್ಚು, ಓಡಿ ಬಂದು ರೈಲ್ವೆ ಹಳಿ ಮೇಲೆ ಮಲಗೇ ಬಿಟ್ಟ, ರೈಲು ಹೋಗೇಬಿಡ್ತು

Updated on: Jul 07, 2025 | 9:52 AM

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ರೀಲ್ಸ್​ ಮಾಡುವ ಹುಚ್ಚು ಹೆಚ್ಚಾಗಿದೆ. ಸ್ವಲ್ಪ ಏರು ಪೇರಾದರೂ ಈ ಅಪಾಯಕಾರಿ ಸ್ಟಂಟ್​ಗಳು ಜೀವಕ್ಕೆ ಕುತ್ತು ತಂದುಬಿಡುತ್ತವೆ. ಭುವನೇಶ್ವರದಲ್ಲಿ ಬಾಲಕನೊಬ್ಬ ರೈಲಿನೆದರು ಹುಚ್ಚುತನ ಪ್ರದರ್ಶಿಸಿದ್ದಾನೆ. ರೈಲು ಬರುವ ವೇಳೆ ಓಡಿ ಹೋಗಿ ರೈಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದಾನೆ. ಮೇಲಿನಿಂದ ರೈಲು ಹೋಗಿದೆ. ಅದೃಷ್ಟವಶಾತ್ ಆತನಿಗೇನೂ ಆಗಿಲ್ಲ. ಆದರೆ ಜೈಲಿನಲ್ಲಿ ಕಂಬಿ ಎಣಿಸುವ ಪರಿಸ್ಥಿತಿ ಎದುರಾಗಿದೆ.ಪುರುನಪಾಣಿ ನಿಲ್ದಾಣದ ಬಳಿಯ ದಾಲುಪಲಿ ಬಳಿ ಈ ಘಟನೆ ನಡೆದಿದೆ. ಈ ಅಪಾಯಕಾರಿ ಸ್ಟಂಟ್​ ಅನ್ನು ಚಿತ್ರೀಕರಿಸಿದ ಸ್ನೇಹಿತರಿಗೂ ಆಪತ್ತು ಬಂದಿದೆ. ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಭುವನೇಶ್ವರ, ಜುಲೈ 07: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ರೀಲ್ಸ್​ ಮಾಡುವ ಹುಚ್ಚು ಹೆಚ್ಚಾಗಿದೆ. ಸ್ವಲ್ಪ ಏರು ಪೇರಾದರೂ ಈ ಅಪಾಯಕಾರಿ ಸ್ಟಂಟ್​ಗಳು ಜೀವಕ್ಕೆ ಕುತ್ತು ತಂದುಬಿಡುತ್ತವೆ. ಭುವನೇಶ್ವರದಲ್ಲಿ ಬಾಲಕನೊಬ್ಬ ರೈಲಿನೆದರು ಹುಚ್ಚುತನ ಪ್ರದರ್ಶಿಸಿದ್ದಾನೆ. ರೈಲು ಬರುವ ವೇಳೆ ಓಡಿ ಹೋಗಿ ರೈಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದಾನೆ. ಮೇಲಿನಿಂದ ರೈಲು ಹೋಗಿದೆ. ಅದೃಷ್ಟವಶಾತ್ ಆತನಿಗೇನೂ ಆಗಿಲ್ಲ. ಆದರೆ ಜೈಲಿನಲ್ಲಿ ಕಂಬಿ ಎಣಿಸುವ ಪರಿಸ್ಥಿತಿ ಎದುರಾಗಿದೆ.ಪುರುನಪಾಣಿ ನಿಲ್ದಾಣದ ಬಳಿಯ ದಾಲುಪಲಿ ಬಳಿ ಈ ಘಟನೆ ನಡೆದಿದೆ. ಈ ಅಪಾಯಕಾರಿ ಸ್ಟಂಟ್​ ಅನ್ನು ಚಿತ್ರೀಕರಿಸಿದ ಸ್ನೇಹಿತರಿಗೂ ಆಪತ್ತು ಬಂದಿದೆ. ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬಾಲಕ ಮಾತನಾಡಿ, ನನ್ನ ಸ್ನೇಹಿತರು ಈ ಐಡಿಯಾ ಮಾಡಿದ್ದರು, ಈ ರೀಲ್ಸ್​ ಹೆಚ್ಚು ವೈರಲ್ ಆಗಬಹುದೆಂದು ಭಾವಿಸಿದ್ದೆ. ರೈಲು ಹಾದುಹೋಗುವಾಗ ಭಯ ಹೆಚ್ಚಾಗಿತ್ತು. ನಾನು ಬದುಕುತ್ತೇನೆ ಎಂದೆನಿಸಿರಲಿಲ್ಲ ಎಂದಿದ್ದಾನೆ. ರೈಲಿನಲ್ಲಿ ರೀಲ್ಸ್​ ಮಾಡಲು ಹೋಗಿ ಹಲವು ಮಂದಿ ಪ್ರಾಣ ಕಳೆದುಕೊಂಡಿರುವ ನಿದರ್ಶನಗಳಿವೆ.

ಹಾಗೆಯೇ ರೈಲ್ವೆ ಹಳಿ ಮೇಲೆ ರೀಲ್ಸ್​ ಮಾಡುತ್ತಿರುವಾಗ ರೈಲು ಡಿಕ್ಕಿ ಹೊಡೆದಿರುವ ಸಂದರ್ಭಗಳೂ ಕೂಡ ಇವೆ. ಹಾಗಾಗಿ ಈ ರೀತಿಯ ಅಪಾಯಕಾರಿ ಸ್ಟಂಟ್​ಗಳನ್ನು ಮಾಡಿ ಜೀವಕ್ಕೆ ಕುತ್ತು ತಂದುಕೊಳ್ಳಬಾರದು ಎಂಬುದು ನಮ್ಮ ಕಳಕಳಿ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More