ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನಡೆಸಲು ಮುಂದಾದ ಬೀದರ್ ನಗರಸಭೆ, ನಂತರ ನಿರ್ಜನ ಪ್ರದೇಶಗಳಿಗೆ ರವಾನೆ

ಅರುಣ್​ ಕುಮಾರ್​ ಬೆಳ್ಳಿ

Updated on: Nov 28, 2023 | 11:15 AM

ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡುವ ಯೋಜನೆಯನ್ನು ಪ್ರತಿ ನಗರ ಸಭೆ, ಪುರಸಭೆ ಜಾರಿಗೊಳಿಸುತ್ತದೆ. ಯೋಜನೆಗೆಂದು ಪೌರ ಸೇವಾ ಸಂಸ್ಥೆಗಳಲ್ಲಿ ಪ್ರತ್ಯೇಕವಾಗಿ ಹಣವನ್ನೂ ತೆಗೆದಿರಿಸಲಾಗುತ್ತದೆ. ಆದರೆ, ಗಮನಿಸಬೇಕಾದ ಸಂಗತಿಯೆಂದರೆ, ಅಷ್ಟಾಗಿಯೂ ಬೀದಿನಾಯಿಗಳ ಸಂಖ್ಯೆ ಇಳಿಮುಖಗೊಳ್ಳುತ್ತಿಲ್ಲ. ಕಾರಣವೇನೆಂದು ಆಯಾ ಪುರಸಭೆಗಳ ಅಧಿಕಾರಿಗಳೇ ಹೇಳಬೇಕು.

ಬೀದರ್: ಬೀದಿನಾಯಿಗಳ (stray dogs) ಉಪಟಳ ರಾಜ್ಯದ ಎಲ್ಲ ನಗರ, ಉಪನಗರದ, ಜಿಲ್ಲಾ ಕೇಂದ್ರಗಳು, ತಾಲ್ಲೂಕು ಕೇಂದ್ರಗಳು ಪಟ್ಟಣ, ಹೋಬಳಿ ಮತ್ತು ಗ್ರಾಮಗಳಲ್ಲಿದೆ. ಅವುಗಳ ನಿಯಂತ್ರಣಕ್ಕೆ ಆಯಾ ಭಾಗಗಳ ಪೌರ ಸೇವಾ ಸಂಸ್ಥೆಗಳು (civic bodies) ಆಗಾಗ ಕ್ರಮ ತೆಗೆದುಕೊಳ್ಳುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ಬೀದಿ ನಾಯಿಗಳು ದಾರಿಹೋಕರ ಮೇಲೆ ಅದರಲ್ಲೂ ವಿಶೇಷವಾಗಿ ಮಕ್ಕಳ ಮೇಲೆ ಹಲ್ಲೆ ಮಾಡಿದಾಗಲೇ ಪುರಸಭೆ ಮತ್ತ್ತು ನಗರ ಸಭೆ ಸಿಬ್ಬಂದಿ ಎಚ್ಚೆತ್ತುಕೊಂಡು ಕಾರ್ಯಾಚರಗೆ ಇಳಿಯುತ್ತದೆ. ಬೀದರ್ ನಗರ ಜಿಲ್ಲಾ ಆಸ್ಪತ್ರೆ (Bidar district hospital) ಆವರಣಕ್ಕೆ ಹೋದ ಜನರನ್ನು ಸ್ವಾಗತಿಸೋದೆ ದೃಶ್ಯಗಳಲ್ಲಿ ಕಾಣುತ್ತಿರುವ ನಾಯಿಗಳು. ಇದು ಒಂದು ಗುಂಪು ಮಾತ್ರ. ಆವರಣ ಬೇರೆ ಬೇರೆ ಭಾಗಗಳಲ್ಲಿ ಒಂದೊಂದು ತಂಡ ತನ್ನ ಸಾಮ್ರಾಜ್ಯ ಮಾಡಿಕೊಂಡಿದೆ. ಓಕೆ, ಬೀದರ್ ಜಿಲ್ಲಾಸ್ಪತ್ರೆ ಕೃಪಾಪೋಷಿತ ನಾಯಿಗಳ ವಿಚಾರ ಮಾತಾಡಲು ಕಾರಣವಿದೆ. ಬೀದರ್ ನಗರಸಭೆಯು ನಗರದಲ್ಲಿರುವ ಬೀದಿನಾಯಿಗಳ ಸಂಖ್ಯೆಯ ಮೇಲೆ ನಿಯಂತ್ರಣ ಸಾಧಿಸಲು ಸಂತಾಹರಣ ಚಿಕಿತ್ಸೆ ನೀಡಲು ಮತ್ತು ಆವುಗಳಿಗೆ ರೆಬೀಸ್ ಚುಚ್ಚುಮದ್ದು ಹಾಕಲು ಟೆಂಡರ್ ಕರೆದಿದ್ದು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅವುಗಳನ್ನು ನಿರ್ಜನ ಪ್ರದೇಶಕ್ಕೆ ಒಯ್ದು ಬಿಡಲಾಗುವುದಂತೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ    

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.