ಬೀದರ್​: ಬಿತ್ತನೆ ಬೀಜ ಗೋದಾಮಿನಲ್ಲಿ ಬೆಂಕಿ, 1 ಕೋಟಿ ರೂ. ಅಧಿಕ ಮೌಲ್ಯದ ಈರುಳ್ಳಿ ಬೀಜ ಭಸ್ಮ

Edited By: ಕಿರಣ್ ಹನುಮಂತ್​ ಮಾದಾರ್

Updated on: Mar 28, 2024 | 6:54 PM

ಬೀದರ್​ ತಾಲೂಕಿನ ಬಗದಲ್(Bagdal) ಗ್ರಾಮದಲ್ಲಿರುವ ಈರುಳ್ಳಿ ಬೀಜ(Onion Seed) ಸಂಗ್ರಹ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿ 1 ಕೋಟಿಗೂ ಹೆಚ್ಚು ಮೌಲ್ಯದ ಈರುಳ್ಳಿ ಬಿತ್ತನೆ ಬೀಜ ಭಸ್ಮವಾದ ಘಟನೆ ನಡೆದಿದೆ. ರೈತರಿಂದ ಈರುಳ್ಳಿ‌ ಬೀಜ ಖರಿದೀಸಿ ಸಂಗ್ರಹಿಸಿಟ್ಟುಕೊಂಡಿದ್ದರು. ಆದರೆ, ಇದೀಗ ಅಗ್ನಿ ಅವಘಡಕ್ಕೆ ರೈತ ಕಂಗಾಲಾಗಿದ್ದಾನೆ.

ಬೀದರ್​, ಮಾ.28: ಬೇಸಿಗೆ ಹಿನ್ನಲೆ ಸ್ವಲ್ಪ ಬೆಂಕಿಯ ಕಿಡಿ ತಾಕಿದರೂ ದೊಡ್ಡಮಟ್ಟದ ಅನಾಹುತವಾಗುವ ಸಾಧ್ಯತೆ ಇರುತ್ತದೆ. ಅದರಂತೆ ಇದೀಗ ಬೀದರ್​ ತಾಲೂಕಿನ ಬಗದಲ್(Bagdal) ಗ್ರಾಮದಲ್ಲಿರುವ ಈರುಳ್ಳಿ ಬೀಜ(Onion Seed) ಸಂಗ್ರಹ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿ 1 ಕೋಟಿಗೂ ಹೆಚ್ಚು ಮೌಲ್ಯದ ಈರುಳ್ಳಿ ಬಿತ್ತನೆ ಬೀಜ ಭಸ್ಮವಾದ ಘಟನೆ ನಡೆದಿದೆ. ಬಗದಲ್ ಗ್ರಾಮದ ಬಾಕಿ‌ ಸೇಠ್‌ಗೆ ಸೇರಿದ ಈರುಳ್ಳಿ ಗೋದಾಮು ಇದಾಗಿದ್ದು, ರೈತರಿಂದ ಈರುಳ್ಳಿ‌ ಬೀಜ ಖರಿದೀಸಿ ಸಂಗ್ರಹಿಸಿಟ್ಟುಕೊಂಡಿದ್ದರು. ಆದರೆ, ಅಗ್ನಿ ಅವಘಡಕ್ಕೆ ರೈತ ಕಂಗಾಲಾಗಿದ್ದಾನೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: Mar 28, 2024 06:54 PM
Loading...
Unable to load recommendations.
Follow Us
ಸುರೇಶ್ ನಾಯಕ್

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More