ಬೀದರ್: ಮಹಾಲಕ್ಷ್ಮೀ ಜಾತ್ರೆಯ ಮೆರವಣಿಗೆ ವೇಳೆ ಗಲಾಟೆ, ಬಿಡಿಸಲು ಹೋದ ಪೊಲೀಸರ ಮೇಲೆಯೇ ಕಲ್ಲು ತೂರಾಟ

| Updated By: Ganapathi Sharma

Updated on: Oct 26, 2023 | 10:32 PM

ಜಾತ್ರೆ ವೇಳೆ ಎರಡು ಗುಂಪುಗಳ ಮಧ್ಯ ಗಲಾಟೆ ನಡೆದಿದೆ. ಗಲಾಟೆ ತಡೆಯಲು ಹೊದ ಪೊಲೀಸರನ್ನು ಅಟ್ಟಾಡಿಸಿ ಹಲ್ಲೆ ಮಾಡಲು ಯುವಕರು ಮುಂದಾಗಿದ್ದಾರೆ. ಇದೇ ವೇಳೆ ಕಲ್ಲು ತೂರಾಟವನ್ನೂ ಮಾಡಿದ್ದಾರೆ. ಕಲ್ಲೂ ತೂರಾಟದಲ್ಲಿ ಇಬ್ಬರು ಕಾನ್​​ಸ್ಟೇಬಲ್​ಗಳಿಗೆ ಸಣ್ಣ ಪುಟ್ಟಗಾಯಗಳಾಗಿವೆ.

ಬೀದರ್, ಅಕ್ಟೋಬರ್ 26: ಬೀದರ್ ಜಿಲ್ಲೆಯ ಬಸವಕಲ್ಯಾಣ (Basavakalyan) ತಾಲೂಕಿನ ಬಟಗೇರಾವಾಡಿ ಗ್ರಾಮದಲ್ಲಿ ಮಹಾಲಕ್ಷ್ಮೀ ಜಾತ್ರೆಯ ಮೆರವಣಿಗೆ (Mahalakshmi Jatra procession) ವೇಳೆ ಯುವಕರ 2 ಗುಂಪಿನ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಇದೇ ವೇಳೆ, ಗಲಾಟೆ ಬಿಡಿಸಲು ಹೋದ ಪೊಲೀಸರ ಮೇಲೆ ಹಾಗೂ ಪೊಲೀಸ್ ವಾಹನದ ಮೇಲೆ ಯುವಕರು ಕಲ್ಲು ತೂರಾಟ ಮಾಡಿರುವುದು ಸಿಸಿಟಿವಿ ದೃಶ್ಯಾವಳಿಯಿಂದ ತಿಳಿದುಬಂದಿದೆ. ಬುಧವಾರ ರಾತ್ರಿ ಘಟನೆ ನಡೆದಿತ್ತು.

ಜಾತ್ರೆ ವೇಳೆ ಎರಡು ಗುಂಪುಗಳ ಮಧ್ಯ ಗಲಾಟೆ ನಡೆದಿದೆ. ಗಲಾಟೆ ತಡೆಯಲು ಹೊದ ಪೊಲೀಸರನ್ನು ಅಟ್ಟಾಡಿಸಿ ಹಲ್ಲೆ ಮಾಡಲು ಯುವಕರು ಮುಂದಾಗಿದ್ದಾರೆ. ಇದೇ ವೇಳೆ ಕಲ್ಲು ತೂರಾಟವನ್ನೂ ಮಾಡಿದ್ದಾರೆ. ಕಲ್ಲೂ ತೂರಾಟದಲ್ಲಿ ಇಬ್ಬರು ಕಾನ್​​ಸ್ಟೇಬಲ್​ಗಳಿಗೆ ಸಣ್ಣ ಪುಟ್ಟಗಾಯಗಳಾಗಿವೆ.

ಘಟನೆ ಸಂಬಂಧ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ