ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬೆಳಗಾವಿ ವಿಭಾಗ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತೆ ದಾಕ್ಷಾಯಿಣಿ ಚೌಶೆಟ್ಟಿ!

ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬೆಳಗಾವಿ ವಿಭಾಗ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತೆ ದಾಕ್ಷಾಯಿಣಿ ಚೌಶೆಟ್ಟಿ!

ಅರುಣ್​ ಕುಮಾರ್​ ಬೆಳ್ಳಿ
|

Updated on:Oct 26, 2023 | 6:22 PM

ವಿಕಾಸ್ ಕೋಕಣೆ ಎಂಬ ವ್ಯಕ್ತಿಯಿಂದ ಲಂಚ ತೆಗೆದುಕೊಳ್ಳುವಾಗ ದಾಕ್ಷಾಯಿಣಿ ಸಿಕ್ಹಾಕಿಕೊಂಡಿದ್ದಾರೆ. ಜಿಎಸ್ ಟಿಗೆ ಸಂಬಂಧಿಸಿದಂತೆ ತಗಾದೆಯೊಂದನ್ನು ಇತ್ಯರ್ಥಗೊಳಿಸಲು ಜಂಟಿ ಆಯುಕ್ತೆ ಹಣ ಡಿಮ್ಯಾಂಡ್ ಮಾಡಿ ತೆಗೆದುಕೊಂಡಿದ್ದರಂತೆ. ಲೋಕಾಯುಕ್ತ ಆಧಿಕಾರಿಗಳು ಅವರ ವಿಚಾರಣೆ ನಡೆಸುತ್ತಿದ್ದಾರೆ.

ಬೆಳಗಾವಿ: ಈ ಮೇಡಂಗೆ ಹೀಗೆ ಅವಮಾನದಿಂದ ಮುಖ ಮುಚ್ಚಿಕೊಳ್ಳುವುದು ಬೇಕಿತ್ತಾ? ಸರ್ಕಾರ ಕೈ ತುಂಬಾ ಸಂಬಳ, ಓಡಾಡಲು ಕಚೇರಿ ಕಾರು, ಅದಕ್ಕೆ ಇಂಧನ, ಮನೆ ಬಾಡಿಗೆ (ಅಥವಾ ಕ್ವಾಟರ್ಸ್) ಎಲ್ಲವನ್ನೂ ನೀಡುತ್ತದೆ. ಆದರೂ ಮೇಡಂಗೆ ದುರಾಸೆ. ಬೆಳಗಾವಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಜಂಟಿ ಆಯುಕ್ತೆಯಾಗಿ (joint commissioner) ಕಾರ್ಯ ನಿರ್ವಹಿಸುತ್ತಿದ್ದ ದಾಕ್ಷಾಯಿಣಿ ಚೌಶೆಟ್ಟಿ (Dakshayani Choushetti) ಲಂಚ ಸ್ವೀಕರಿಸುವಾ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಅಧಿಕಾರಿಗಳ (Lokayukta officials) ಬಲೆಗೆ ಬಿದ್ದಿದ್ದಾರೆ. ಇವರು ಲಂಚದ ರೂಪದಲ್ಲಿ ಸ್ವೀಕರಿಸಿದ ಹಣವಾದರೂ ಎಷ್ಟು ಗೊತ್ತಾ? ಕೇವಲ ರೂ. 25,000! ಆದರೆ ಲಂಚದ ರೂಪದಲ್ಲಿ ಪಡೆದ ಹಣ 25 ಸಾವಿರವಾದರೇನು, 25 ಲಕ್ಷವಾದರೇನು ಅಥವಾ 25 ರೂ. ಅದನ್ನು ಲಂಚ ಅಂತಲೇ ಕರೆಯೋದು. ವಿಕಾಸ್ ಕೋಕಣೆ ಎಂಬ ವ್ಯಕ್ತಿಯಿಂದ ಲಂಚ ತೆಗೆದುಕೊಳ್ಳುವಾಗ ದಾಕ್ಷಾಯಿಣಿ ಸಿಕ್ಹಾಕಿಕೊಂಡಿದ್ದಾರೆ. ಜಿಎಸ್ ಟಿಗೆ ಸಂಬಂಧಿಸಿದಂತೆ ತಗಾದೆಯೊಂದನ್ನು ಇತ್ಯರ್ಥಗೊಳಿಸಲು ಜಂಟಿ ಆಯುಕ್ತೆ ಹಣ ಡಿಮ್ಯಾಂಡ್ ಮಾಡಿ ತೆಗೆದುಕೊಂಡಿದ್ದರಂತೆ. ಲೋಕಾಯುಕ್ತ ಆಧಿಕಾರಿಗಳು ಅವರ ವಿಚಾರಣೆ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 26, 2023 06:21 PM