ಹುಲಿ ಉಗುರು ವಿವಾದ: ವನ್ಯಜೀವಿ ಉತ್ಪನ್ನ ಮನೆಯಲ್ಲಿಟ್ಟುಕೊಂಡವರು ಅದನ್ನು ಇಲಾಖೆಗೆ ಒಪ್ಪಿಸಿದರೆ ಶಿಕ್ಷಾರ್ಹರಲ್ಲವೇ? ಈಶ್ವರ್ ಖಂಡ್ರೆ ಹೇಳೋದೇನು?
ಕಲಬುರಗಿಯಲ್ಲಿ ಮಾತಾಡಿದ್ದ ಸಚಿವ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿದವರು ಯಾರೇ ಆಗಿರಲಿ ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಲಾಗುವುದು ಅಂತ ಹೇಳಿದ್ದರು. ಆದರೆ, ಹುಲಿ ಉಗುರಿನ ಪೆಂಡೆಂಟ್ ಅರಣ್ಯಾಧಿಕಾರಿಗಳಿಗೆ ಸರೆಂಡರ್ ಮಾಡಿದ ಬಳಿಕ ಜಗ್ಗೇಶ್ ಅವರನ್ನು ಮನೆಗೆ ಕಳಿಸಲಾಗಿದೆ! ಹಾಗಾದರೆ, ಹುಲಿಯುಗುರಿನ ಪ್ರಕರಣಕ್ಕೆ ನಾಂದಿ ಹಾಡಿದ ಬಿಗ್ ಬಾಸ್ ಕನ್ನಡ ಸ್ಪರ್ಧಿ ವರ್ತೂರು ಸಂತೋಷ್ 4 ದಿನಗಳಿಂದ ನ್ಯಾಯಾಂಗ ಕಸ್ಟಡಿಯಲ್ಲಿದ್ದಾರಲ್ಲ?
ಬೆಂಗಳೂರು: ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಅರಣ್ಯ ಖಾತೆ ಸಚಿವ ಈಶ್ವರ್ ಖಂಡ್ರೆ (Eshwar Khandre) ಕೆಲ ಗೊಂದಲಮಯ ಹೇಳಿಕೆಗಳನ್ನು ನೀಡಿದರು. ವನ್ಯಜೀವಿ ಸಂರಕ್ಷಣಾ ಕಾಯ್ದೆಯ (Wildlife Protection Act) ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಇಲ್ಲ ಮತ್ತು ಅದನ್ನು ವಿವರಿಸಬೇಕಾದ ಅಗತ್ಯ ಇದೆ ಎಂದು ಹೇಳುವ ಸಚಿವ, ಯಾರೆಲ್ಲ ಮನೆಗಳಲ್ಲಿ ವನ್ಯಜೀವಿ ಉತ್ಪನ್ನಗಳನ್ನು ಇಟ್ಟುಕೊಡೊಂಡಿದ್ದಾರೋ ಅವರೆಲ್ಲ ಅರಣ್ಯ ಇಲಾಖೆಗೆ ತಂದು ಒಪ್ಪಿಸುವಂತೆ ಹೇಳಲಾಗುವುದು ಅನ್ನುತ್ತಾರೆ. ಅವರೇ ಹೇಳಿದಂತೆ ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಮತ್ತು ಚಿತ್ರನಟ ಜಗ್ಗೇಶ್ (Jaggesh) ಅವರು ತಮ್ಮಲಿದ್ದ ವನ್ಯಜೀವಿ ಉತ್ಪನ್ನವನ್ನು ಇಲಾಖೆಗೆ ಒಪ್ಪಿಸಿದ್ದಾರೆ ಮತ್ತು ತನಿಖಾಧಿಕಾರಿಗಳೊಂದಿಗೆ ಸಹಕರಿಸಿದ್ದಾರೆ. ನಿನ್ನೆ ಕಲಬುರಗಿಯಲ್ಲಿ ಮಾತಾಡಿದ ಸಚಿವ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿದವರು ಯಾರೇ ಆಗಿರಲಿ ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಲಾಗುವುದು ಅಂತ ಹೇಳಿದ್ದರು. ಆದರೆ, ಹುಲಿ ಉಗುರಿನ ಪೆಂಡೆಂಟ್ ಅರಣ್ಯಾಧಿಕಾರಿಗಳಿಗೆ ಸರೆಂಡರ್ ಮಾಡಿದ ಬಳಿಕ ಜಗ್ಗೇಶ್ ಅವರನ್ನು ಮನೆಗೆ ಕಳಿಸಲಾಗಿದೆ! ಹಾಗಾದರೆ, ಹುಲಿಯುಗುರಿನ ಪ್ರಕರಣಕ್ಕೆ ನಾಂದಿ ಹಾಡಿದ ಬಿಗ್ ಬಾಸ್ ಕನ್ನಡ ಸ್ಪರ್ಧಿ ವರ್ತೂರು ಸಂತೋಷ್ 4 ದಿನಗಳಿಂದ ನ್ಯಾಯಾಂಗ ಕಸ್ಟಡಿಯಲ್ಲಿದ್ದಾರಲ್ಲ? ಈಶ್ವರ್ ಖಂಡ್ರೆ, ತಜ್ಞರ ಸಮಿತಿ ರಚಿಸಿ ಕಾಯ್ದೆಯ ಪರಾಮರ್ಶೆ ನಡೆಸಲಾಗುತ್ತದೆ ಅಂತೆಲ್ಲ ಬೆಂಗಳೂರಲ್ಲಿ ಹೇಳುತ್ತಿದ್ದಾರೆ. ಅದು ಸರಿ, ಒಂದೇ ತಪ್ಪು ಮಾಡಿರುವ ಇಬ್ಬರಿಗೆ ಬೇರೆ ಬೇರೆ ಮಾನದಂಡಗಳು ಯಾಕೆ? ವರ್ತೂರು ಸಂತೋಷ್ ತಪ್ಪಿತಸ್ಥನಾದರೆ ಉಳಿದವರು ಕೂಡ ಅಪರಾಧಿಗಳೇ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ