ಲೈಂಗಿಕ ಕ್ರಿಯೆ ವಿಡಿಯೋ ಮಾಡಿ ಪತಿಯಿಂದ ಶೇರ್ ಆರೋಪ:​ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​

Updated on: Oct 05, 2025 | 10:09 AM

ಲೈಂಗಿಕ ಕ್ರಿಯೆಯ ವಿಡಿಯೋ ಮಾಡಿ ಪತಿ ಆತನ ಸ್ನೇಹಿತರಿಗೆ ಶೇರ್​ ಮಾಡುತ್ತಿದ್ದ ಎಂದು ಆರೋಪಿಸಿ ಮಹಿಳೆ ದಾಖಲಿಸಿದ್ದ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಈ ಬಗ್ಗೆ ವಿಡಿಯೋ ಮಾಡಿರುವ ಸಂತ್ರಸ್ತೆ ಎನ್ನಲಾದ ಮಹಿಳೆಯ ಪತಿ ಹೀನಾಮುಲ್ ಹಕ್, ಪತ್ನಿಯ ವಿರುದ್ಧವೇ ಸಾಲು ಸಾಲು ಆರೋಪ ಮಾಡಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ವಿಡಿಯೋ ಮೂಲಕ ಅಲವತ್ತುಕೊಂಡಿದ್ದಾರೆ.

ಬೆಂಗಳೂರು, ಅಕ್ಟೋಬರ್​ 05: ಬೆಡ್​ ರೂಮ್​ ನ ಖಾಸಗಿ ಕ್ಷಣದ ವಿಡಿಯೋ ಮಾಡಿ ಗಂಡ ಸ್ನೇಹಿತರಿಗೆ ನೀಡ್ತಿದ್ದ ಎಂಬ ಮಹಿಳೆಯ ಆರೋಪಕ್ಕೆ ಆಕೆಯ ಪತಿ ತಿರುಗೇಟು ನೀಡಿದ್ದಾರೆ. ಹೆಂಡತಿ ಬಗ್ಗೆಯೇ ಆತ ಸಾಲು ಸಾಲು ಆರೋಪ ಮಾಡಿದ್ದು, ಆ ಮೂಲಕ ಪ್ರಕರಣಕ್ಕೆ ಮತ್ತೊಂದು ಹೊಸ ಟ್ವಿಸ್ಟ್​ ಸಿಕ್ಕಿದೆ. ಈ ಬಗ್ಗೆ ವಿಡಿಯೋ ರಿಲೀಸ್​ ಮಾಡಿರುವ ಹೀನಾಮುಲ್ ಹಕ್, ಪತ್ನಿಯ ಆರೋಪಗಳನ್ನ ತಳ್ಳಿ ಹಾಕಿದ್ದಾನೆ. ಮದುವೆಗೆ ಮುಂಚೆ ಆಕೆ ಜೊತೆ ಸಂಭಂದ ಹೊಂದಿದ್ದು ನಿಜ. ಆದರೆ ಆಕೆಯೇ ನನ್ನ ಒತ್ತಾಯ ಮಾಡಿ ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ಆಗಿನಿಂದ ಆಕೆ ಸೈಕೋ ರೀತಿಯಲ್ಲಿ ವರ್ತಿಸುತ್ತಿದ್ದು, ನನಗೆ ತುಂಬಾ ಟಾರ್ಚರ್ ಮಾಡಿದ ಕಾರಣ ಆಕೆಯನ್ನ ಮದುವೆ ಆಗಿದ್ದೆ. ಅವಳು ಹೇಳುವಂತೆ ನನಗೆ 21 ಮದುವೆ ಆಗಿಲ್ಲ. ಆಗಿರೋದು ಒಂದೇ ಮದುವೆ. ಬ್ರೋಕರ್ ಒಬ್ಬರಿಂದ ಈ ಸಂಬಂಧ ಬಂದಿದ್ದು, ನನ್ನ ಬಳಿಯೇ ಅವರು 17 ಲಕ್ಷ ಹಣ ವಸೂಲಿ ಮಾಡಿದ್ದಾರೆ. ನನ್ನ ಪತ್ನಿಗೆ 13 ಲಕ್ಷದ ಒಡವೆ ನಾನೇ ಕೊಡಿಸಿದ್ದೇನೆ. ಅವಳೇ ನನ್ನ ತಂದೆ ತಾಯಿಗೆ ಪ್ರತಿನಿತ್ಯ ಹೊಡೆಯುತ್ತಿದ್ದಳು. ನನಗೆ ನ್ಯಾಯ ಕೊಡಿಸಿ ಎಂದು ವಿಡಿಯೋ ಮೂಲಕ ಹೀನಾಮುಲ್ ಹಕ್ ಅಳಲು ತೋಡಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.