ಕಿಚ್ಚನ ಕೊನೇ ಪಂಚಾಯ್ತಿ; ಹೋಗೋರು ಯಾರು? ಉಳಿದುಕೊಳ್ಳೋರು ಯಾರು?

Updated on: Jan 20, 2024 | 8:08 AM

ವಿನಯ್ ಗೌಡ, ನಮ್ರತಾ ಗೌಡ, ವರ್ತೂರು ಸಂತೋಷ್, ಡ್ರೋನ್ ಪ್ರತಾಪ್ ಹಾಗೂ ಕಾರ್ತಿಕ್ ಮೇಲೆ ನಾಮಿನೇಷನ್ ತೂಗುಗತ್ತಿ ಇದೆ. ಈ ಪೈಕಿ ಇಬ್ಬರು ಎಲಿಮಿನೇಟ್ ಆಗಲಿದ್ದಾರೆ.

ಬಿಗ್ ಬಾಸ್ (Bigg Boss) ಫಿನಾಲೆ ಹಂತ ತಲುಪಿದೆ. ಇಂದು (ಜನವರಿ 20) ನಡೆಯೋದು ಈ ಸೀಸನ್​ನ ಕೊನೆಯ ಪಂಚಾಯ್ತಿ. ಮುಂದಿನ ವಾರ ಅದ್ದೂರಿಯಾಗಿ ಫಿನಾಲೆ ನಡೆಯಲಿದೆ. ಈ ವಾರ ಐದು ಮಂದಿ ನಾಮಿನೇಟ್ ಆಗಿದ್ದಾರೆ. ಈ ಪೈಕಿ ಒಬ್ಬರು ದೊಡ್ಮನೆಯಿಂದ ಹೋಗೋದು ಪಕ್ಕಾ. ಅದು ಯಾರು ಅನ್ನೋದು ಸದ್ಯದ ಕುತೂಹಲ. ವಿನಯ್ ಗೌಡ, ನಮ್ರತಾ ಗೌಡ, ವರ್ತೂರು ಸಂತೋಷ್, ಡ್ರೋನ್ ಪ್ರತಾಪ್ ಹಾಗೂ ಕಾರ್ತಿಕ್ ಮೇಲೆ ನಾಮಿನೇಷನ್ ತೂಗುಗತ್ತಿ ಇದೆ. ಈ ಪೈಕಿ ಇಬ್ಬರು ಎಲಿಮಿನೇಟ್ ಆಗಲಿದ್ದಾರೆ. ಆ ಮೂಲಕ ಸಂಖ್ಯೆ ಆರಕ್ಕೆ ಇಳಿಕೆ ಆಗಲಿದೆ. ಇಂದು ಕಲರ್ಸ್ ಕನ್ನಡದಲ್ಲಿ ಪಂಚಾಯ್ತಿ ಎಪಿಸೋಡ್ ಪ್ರಸಾರ ಕಾಣಲಿದೆ. 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More