ಈಗಲ್​​ಟನ್ ರೆಸಾರ್ಟ್​​ನಿಂದ ಬಿಗ್​​ಬಾಸ್ ಮನೆಗೆ ಬಂದ ಸ್ಪರ್ಧಿಗಳು: ವಿಡಿಯೋ

Updated on: Oct 09, 2025 | 9:01 AM

Bigg Boss Kannada season 12: ಬಿಗ್​​ಬಾಸ್ ಕನ್ನಡ ಸೀಸನ್ 12 ತಾತ್ಕಾಲಿಕ ಹಿನ್ನಡೆ ಬಳಿಕ ಇದೀಗ ಮತ್ತೆ ಪ್ರಾರಂಭವಾಗಿದೆ. ಇಂದು ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಸ್ಪರ್ಧಿಗಳನ್ನು ಈಗಲ್​​ಟನ್ ರೆಸಾರ್ಟ್​​ನಿಂದ ಬಿಗ್​​ಬಾಸ್ ಮನೆಗೆ ತಂದು ಬಿಡಲಾಗಿದೆ. ಸ್ಪರ್ಧಿಗಳು ಜಾಲಿವುಡ್ ಸ್ಟುಡಿಯೋಕ್ಕೆ ವಾಪಸ್ಸಾದ ವಿಡಿಯೋ ಇಲ್ಲಿದೆ ನೋಡಿ...

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಸೆಟ್ ನಿರ್ಮಿಸಲಾಗಿದ್ದ ಜಾಲಿವುಡ್ ಸ್ಟುಡಿಯೋ ಮಾಲಿನ್ಯ ನಿಯಮಗಳನ್ನು ಉಲ್ಲಂಘಸಿದ್ದ ಕಾರಣಕ್ಕೆ ಸ್ಟುಡಿಯೋಗೆ ಬೀಗ ಹಾಕಲಾಗಿತ್ತು. ಇದರಿಂದಾಗಿ ಬಿಗ್​​ಬಾಸ್ ಶೋ ಬಂದ್ ಆಗಿತ್ತು, ಸ್ಪರ್ಧಿಗಳನ್ನು ಈಗಲ್​​ಟನ್ ರೆಸಾರ್ಟ್​​​​ಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಜಿಲ್ಲಾಧಿಕಾರಿಗಳು ಶೋ ಪ್ರಾರಂಭಿಸಲು ಅನುಮತಿ ನೀಡಿದ್ದು, ರಾತ್ರೋರಾತ್ರಿ ಸ್ಪರ್ಧಿಗಳನ್ನು ರೆಸಾರ್ಟ್​​ನಿಂದ ಮತ್ತೆ ಬಿಗ್​​ಬಾಸ್ ಮನೆಗೆ ಕರೆತರಲಾಗಿದೆ. ಸ್ಪರ್ಧಿಗಳು ರೆಸಾರ್ಟ್​​ನಿಂದ ಹೊರಟು, ಬಿಗ್​​ಬಾಸ್ ಮನೆ ಸೇರಿಕೊಂಡ ವಿಡಿಯೋ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ