ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್ಬಾಸ್
ಬಿಗ್ಬಾಸ್ ಕನ್ನಡ ಸೀಸನ್ 11 ಶುರುವಾಗಿ ಎರಡು ವಾರವಾಗಿವೆ. ಈ ಬಾರಿ ಮೊದಲಿನಿಂದಲೂ ಜಗಳ, ಜಿದ್ದಾ-ಜಿದ್ದುಗಳೇ ಹೆಚ್ಚಾಗಿ ಕಂಡು ಬರುತ್ತಿದೆ. ಗೆಲ್ಲಲು ಸ್ಪರ್ಧಿಗಳು ಯಾವ ಹಂತಕ್ಕೆ ಹೋಗಲು ಸಹ ತಯಾರಾಗಿದ್ದಾರೆ. ಇದೇ ಪ್ರಯತ್ನದಲ್ಲಿ ಕೆಲವು ಸ್ಪರ್ಧಿಗಳು ನಿಯಮ ಮುರಿದಿದ್ದು, ಅದಕ್ಕೆ ಎಲ್ಲರಿಗೂ ಶಿಕ್ಷೆ ಕೊಟ್ಟಿದ್ದಾರೆ ಬಿಗ್ಬಾಸ್.
ಬಿಗ್ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ ಒಂದು ವಾರ ಕಳೆದಿದೆ. ಈ ಬಾರಿಯ ಸ್ಪರ್ಧಿಗಳು, ಜಗಳ, ಪರಸ್ಪರ ನಿಂದನೆ, ಜಿದ್ದಾ-ಜಿದ್ದಿನಲ್ಲೇ ಹೆಚ್ಚು ತೊಡಗಿದ್ದಾರೆ. ಗೆಲ್ಲುವ ಕಾರಣಕ್ಕೆ ನಿಯಮಗಳನ್ನು ಸಹ ಮುರಿದಿದ್ದಾರೆ. ಇದೀಗ ಮಂಗಳವಾರದ ಎಪಿಸೋಡ್ನ ಹೊಸ ಪ್ರೋಮೋ ಒಂದು ಬಿಡುಗಡೆ ಆಗಿದ್ದು, ಮನೆಯ ಸ್ಪರ್ಧಿಗಳು ಮತ್ತೊಂದು ನಿಯಮ ಮುರಿದಿದ್ದಾರೆ. ನಿಯಮ ಮುರಿದ ಕೆಲವೇ ನಿಮಿಷಗಳಲ್ಲಿ ಬಿಗ್ಬಾಸ್ ಮನೆಯ ಎಲ್ಲ ಸ್ಪರ್ಧಿಗಳಿಗೆ ಕಠಿಣವಾದ ಶಿಕ್ಷೆ ನೀಡಿದ್ದಾರೆ. ಕೆಲವರು ಮಾಡಿರುವ ತಪ್ಪಿನಿಂದ ಇಡೀ ಮನೆಯವರೇ ಶಿಕ್ಷೆಗೆ ಗುರಿಯಾಗುವಂತೆ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ