ಸಿನಿಮಾ ಮಾಡ್ತಾರೆ ವರ್ತೂರು ಸಂತೋಷ್; ಸೂಚನೆ ಕೊಟ್ಟ ಬಿಗ್ ಬಾಸ್ ಸ್ಪರ್ಧಿ

Updated on: Feb 09, 2024 | 8:14 AM

‘ಬಿಗ್ ಬಾಸ್’ ಫೈನಲ್ ತಲುಪಿದ ವರ್ತೂರು ಸಂತೋಷ್ ಅವರಿಗೆ ಸಿಕ್ಕ ಜನಪ್ರಿಯತೆ ದೊಡ್ಡದು. ಇದರ ಜೊತೆಗೆ ಅವರಿಗೆ ಚಿತ್ರರಂಗದ ಜೊತೆ ನಂಟು ಬೆಳೆದಿದೆ. ಸುದೀಪ್ ಅವರ ಜೊತೆ ಪರಿಚಯ ಬೆಳೆದಿದೆ. ಈ ಕಾರಣಕ್ಕೆ ಸಂತೋಷ್ ಸಿನಿಮಾ ನಿರ್ಮಾಣ ಮಾಡುವ ಆಲೋಚನೆಯಲ್ಲಿ ಇದ್ದಾರೆ. 

‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಫೈನಲ್ ತಲುಪಿದ ವರ್ತೂರು ಸಂತೋಷ್ ಅವರು ಸಾಕಷ್ಟು ಸುದ್ದಿ ಆದರು. ಅವರಿಗೆ ಸಿಕ್ಕ ಜನಪ್ರಿಯತೆ ದೊಡ್ಡದು. ಇದರ ಜೊತೆಗೆ ಅವರಿಗೆ ಚಿತ್ರರಂಗದ ಜೊತೆ ನಂಟು ಬೆಳೆದಿದೆ. ಸುದೀಪ್ ಅವರ ಪರಿಚಯ ಆಗಿದೆ. ಈ ಕಾರಣಕ್ಕೆ ಅವರು ಸಿನಿಮಾ ನಿರ್ಮಾಣ ಮಾಡುವ ಆಲೋಚನೆಯಲ್ಲಿ ಇದ್ದಾರೆ. ಹಾಗಂತ ನಾಳೆಯೇ ಬಂದು ಅವರು ಸಿನಿಮಾ ಮಾಡುತ್ತಿಲ್ಲ. ಅವರಿಗೆ ಎರಡು ವರ್ಷ ಸಮಯ ಬೇಕಂತೆ. ಇದಾದ ಬಳಿಕ ಅವರು ಸಿನಿಮಾ ನಿರ್ಮಾಣಕ್ಕೆ ಇಳಿಯಲಿದ್ದಾರೆ. ಇದರ ಜೊತೆಗೆ ನಟನೆ ಮಾಡೋಕೆ ಅವಕಾಶ ಸಿಕ್ಕರೆ ಧ್ರುವ ಸರ್ಜ ಹಾಗೂ ಸುದೀಪ್ ಜೊತೆ ಕೆಲಸ ಮಾಡೋ ಆಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More