ಕಿಚ್ಚ ಸುದೀಪ್ ಅವರಿಗೆ ವಿಶೇಷ ಉಡುಗೊರೆ ಕೊಡಲಿದ್ದಾರೆ ವರ್ತೂರು ಸಂತೋಷ್
Varthur Santhosh: ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಬಿಗ್ಬಾಸ್ ಮನೆಯಿಂದ ಹೊರ ಬಂದ ಬಳಿಕ ಒಳ್ಳೆಯ ಹವಾ ಎಬ್ಬಿಸಿದ್ದಾರೆ. ಕಿಚ್ಚ ಸುದೀಪ್ ಬಗ್ಗೆ ಮಾತನಾಡಿದ ಸಂತೋಷ್ ಅವರು ಅಣ್ಣನಿಗೆ ಕೊಡಲು ಬಯಸಿರುವ ಉಡುಗೊರೆಯ ಬಗ್ಗೆ ಹೇಳಿಕೊಂಡಿದ್ದಾರೆ.
ವರ್ತೂರು ಸಂತೋಷ್ (Varthur Santhosh), ಬಿಗ್ಬಾಸ್ ಗೆಲ್ಲದಿದ್ದರೂ, ಬಿಗ್ಬಾಸ್ ವಿನ್ನರ್ಗಿಂತಲೂ ಹೆಚ್ಚು ಹವಾ ಎಬ್ಬಿಸಿದ್ದಾರೆ. ಬಿಗ್ಬಾಸ್ ಮನೆಯಿಂದ ಹೊರಬಂದ ಕೂಡಲೇ ಅದ್ಧೂರಿ ಕಾರ್ಯಕ್ರಮ ಮಾಡಿ ಸ್ಪರ್ಧಿಗಳನ್ನೆಲ್ಲ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ವರ್ತೂರು ಸಂತು, ಹೊಸಕೋಟೆ ಸೇರಿದಂತೆ ಇನ್ನೂ ಕೆಲವು ನಗರಗಳಲ್ಲಿ ಅದ್ಧೂರಿಯಾ ಮೆರವಣಿಗೆಯನ್ನೂ ಮಾಡಿದ್ದಾರೆ. ಇಂದು (ಫೆಬ್ರವರಿ 08) ಸುದ್ದಿಗೋಷ್ಠಿ ನಡೆಸಿ ಮುಂದೆ ತಾವು ಆಯೋಜಿಸಲಿರುವ ಹಳ್ಳಿಕಾರ್ ರೇಸ್ ಬಗ್ಗೆ ಕೆಲ ಮಾಹಿತಿಯನ್ನು ಹಂಚಿಕೊಂಡರು. ಈ ವೇಳೆ ಟಿವಿ9 ಜೊತೆ ಮಾತನಾಡಿದ ವರ್ತೂರು ಸಂತೋಷ್, ರೇಸ್ಗೆ ಸುದೀಪ್ ಅವರನ್ನು ಅತಿಥಿಯಾಗಿ ಕರೆಯಲಿದ್ದೀನಿ. ಮಾತ್ರವಲ್ಲ ಅವರಿಗೆ ಹಳ್ಳಿಕಾರ್ ಎತ್ತುಗಳನ್ನು ಉಡುಗೊರೆಯಾಗಿ ಕೊಡುವ ಆಸೆಯಿದೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್ಗೆ ಗುದ್ದಿದ BMTC ಬಸ್
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಆಳಂದ ಮತಗಳ್ಳತನ: ಚಾರ್ಜ್ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ

