‘ಅಂಥ ಮುಠಾಳ ನಾನಲ್ಲ’: ಹೆಂಡತಿ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ವರ್ತೂರು ಸಂತೋಷ್ ಗರಂ
‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಸ್ಪರ್ಧಿಸಿ ಬಂದಿರುವ ವರ್ತೂರು ಸಂತೋಷ್ ಅವರ ಜೀವನದಲ್ಲಿ ಕೆಲವು ವಿವಾದಗಳು ಇವೆ. ಅವರ ದಾಂಪತ್ಯದಲ್ಲಿ ಈ ಮೊದಲೇ ಬಿರುಕು ಮೂಡಿತ್ತು. ಆ ಕುರಿತು ಬಿಗ್ ಬಾಸ್ ಮನೆಯಲ್ಲಿ ಅವರು ಮಾತನಾಡಿದ್ದರು. ಶೋ ಮುಗಿದ ನಂತರವೂ ಆ ವಿಚಾರದ ಬಗ್ಗೆ ಮತ್ತೆ ಮತ್ತೆ ಪ್ರಶ್ನೆ ಎದುರಾಗುತ್ತಿದೆ. ಪತ್ನಿಯ ಜೊತೆಗಿನ ಕಿರಿಕ್ ಬಗ್ಗೆ ಪ್ರಶ್ನೆ ಕೇಳಿದಾಗ ಸಂತೋಷ್ ಖಡಕ್ ಉತ್ತರ ನೀಡಿದ್ದಾರೆ.
ಹಳ್ಳಿಕಾರ್ ತಳಿಯ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ವರ್ತೂರು ಸಂತೋಷ್ ಅವರು ತುಂಬ ಫೇಮಸ್ ಆಗಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada) ಶೋನಲ್ಲಿ ಸ್ಪರ್ಧಿಸಿದ ಬಳಿಕ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಯಿತು. ಫಿನಾಲೆ ತನಕ ಪೈಪೋಟಿ ನೀಡಿದ್ದ ಅವರಿಗೆ ಅಪಾರ ಜನಬೆಂಬಲ ಸಿಕ್ಕಿತು. ವರ್ತೂರು ಸಂತೋಷ್ (Varthur Santhosh) ಅವರ ಜೀವನದಲ್ಲಿ ಒಂದಷ್ಟು ವಿವಾದಗಳು ಕೂಡ ಇವೆ. ಅವರ ಸಂಸಾರದಲ್ಲಿ ಬಹಳ ಹಿಂದೆಯೇ ಬಿರುಕು ಮೂಡಿತ್ತು. ಆ ಬಗ್ಗೆ ಬಿಗ್ ಬಾಸ್ ಮನೆಯಲ್ಲೂ ಅವರು ಮಾತನಾಡಿದ್ದರು. ದೊಡ್ಮನೆಯಿಂದ ಹೊರಬಂದ ನಂತರವೂ ಆ ಬಗ್ಗೆ ಪದೇಪದೇ ಪ್ರಶ್ನೆ ಎದುರಾಗುತ್ತಿದೆ. ಹಳ್ಳಿಕಾರ್ ರೇಸ್ ಬಗ್ಗೆ ಮಾಹಿತಿ ನೀಡಲು ಕರೆದ ಸುದ್ದಿಗೋಷ್ಠಿಯಲ್ಲಿ ಪತ್ನಿ (Varthur Santhosh Wife) ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಸಂತೋಷ್ ಗರಂ ಆಗಿದ್ದಾರೆ. ‘ಇದು ಪರ್ಸನಲ್ ವಿಚಾರ. ಅದನ್ನು ತಂದು ಪಬ್ಲಿಕ್ನಲ್ಲಿ ಹೇಳುವ ಮುಠಾಳ ನಾನಲ್ಲ. ಯಾರೋ ಮುಠಾಳರು ಅಂಥ ಕೆಲಸ ಮಾಡಿದ್ದಾರೆ ಎಂದರೆ ಅವರ ಮಟ್ಟಕ್ಕೆ ಇಳಿಯಲು ನಾವು ರೆಡಿ ಇಲ್ಲ. ಎಲ್ಲರ ಮನೆಯ ದೋಸೆ ಕೂಡ ತೂತು. ಕೆಲವರ ಮನೆ ಹಂಚೇ ತೂತಾಗಿರುತ್ತದೆ’ ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ

