AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಮುಗಿದ ಬಳಿಕ ಮದುವೆ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ವರ್ತೂರು ಸಂತೋಷ್​

ಬಿಗ್​ ಬಾಸ್​ ಮುಗಿದ ಬಳಿಕ ಮದುವೆ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ವರ್ತೂರು ಸಂತೋಷ್​

ಮದನ್​ ಕುಮಾರ್​
|

Updated on: Jan 31, 2024 | 6:15 PM

ವರ್ತೂರು ಸಂತೋಷ್​ ಅವರಿಗೆ ಮದುವೆ ಆಗಿದೆ ಎಂಬ ವಿಚಾರ ಬಿಗ್​ ಬಾಸ್​ಗೆ ಬಂದ ಬಳಿಕ ಗೊತ್ತಾಯಿತು. ಅವರ ವಿರುದ್ಧ ಒಂದಷ್ಟು ಆರೋಪಗಳು ಕೂಡ ಕೇಳಿಬಂದಿದ್ದವು. ಅವುಗಳ ಕುರಿತು ಈಗ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ತೆರೆದ ಪುಸ್ತಕ. ಯಾರು ಬೇಕಿದ್ದರೂ ವಿಮರ್ಶೆ ಮಾಡಬಹುದು. ಒಂದು ವೇಳೆ ನಾನು ತಪ್ಪು ಮಾಡಿದ್ದರೆ ಓಡಿ ಹೋಗಬೇಕಿತ್ತು’ ಎಂದು ವರ್ತೂರು ಸಂತೋಷ್​ ಹೇಳಿದ್ದಾರೆ.

ವರ್ತೂರು ಸಂತೋಷ್​ ಅವರು ಬಿಗ್​ ಬಾಸ್ (Bigg Boss Kannada)​ ಕಾರ್ಯಕ್ರಮದಿಂದ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಈ ಶೋನಲ್ಲಿ ಅವರು ಸ್ಪರ್ಧಿಸುತ್ತಿದ್ದಂತೆಯೇ ಒಂದಷ್ಟು ವಿವಾದಗಳು ಕೂಡ ತಲೆ ಎತ್ತಿದ್ದವು. ಅವರ ಮದುವೆಯ (Varthur Santhosh Marriage) ವಿಚಾರ ಕೂಡ ಚರ್ಚೆ ಆಯಿತು. ಮನಸ್ತಾಪದ ಕಾರಣದಿಂದ ಪತ್ನಿಯಿಂದ ದೂರಾಗಿರುವ ಬಗ್ಗೆ ವರ್ತೂರು ಸಂತೋಷ್​ (Varthur Santhosh) ಅವರು ಬಿಗ್​ ಬಾಸ್​ ಮನೆಯಲ್ಲಿ ಮಾತನಾಡಿದ್ದರು. ಈಗ ಶೋ ಮುಗಿದಿದೆ. ಫಿನಾಲೆ ತಲುಪಿ ಬಂದಿರುವ ಅವರಿಗೆ ಈ ವಿಚಾರದ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಅವರು ನೇರ ಉತ್ತರ ನೀಡಿದ್ದಾರೆ. ‘ನಾನು ತೆರೆದ ಪುಸ್ತಕ. ಯಾರು ಬೇಕಿದ್ದರೂ ವಿಮರ್ಶೆ ಮಾಡಬಹುದು. ಒಂದು ವೇಳೆ ನಾನು ತಪ್ಪು ಮಾಡಿದ್ದರೆ ಓಡಿ ಹೋಗಬೇಕಿತ್ತು. ಅಂಥ ಕೆಲಸ ಮಾಡಿ, ಇಂಥ ಕಾರ್ಯಕ್ರಮಕ್ಕೆ ಬಂದು ನಾನವನಲ್ಲ, ನಾನವನಲ್ಲ ಎನ್ನುವಂತಹ ವ್ಯಕ್ತಿ ನಾನಲ್ಲ. ವೈಯಕ್ತಿಕ ವಿಚಾರಕ್ಕೆ ಸಾರ್ವಜನಿಕವಾಗಿ ಎಷ್ಟು ಉತ್ತರ ನೀಡಬೇಕೋ ನನಗೆ ತಿಳಿದಿಲ್ಲ. ನಮ್ಮ ದೊಡ್ಡವರು ಏನು ಹೇಳುತ್ತಾರೋ ಅದನ್ನು ಕೇಳಿಕೊಂಡು ನಂತರ ಮಾತಾಡುತ್ತೇನೆ’ ಎಂದು ವರ್ತೂರು ಸಂತೋಷ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ