ಸಂವಿಧಾನವನ್ನು ಅಸ್ಖಲಿತವಾಗಿ ವಾಚನ ಮಾಡುವ 5-ವರ್ಷದ ಬಾಲಕನ ಪ್ರತಿಭೆ ಕಂಡು ಸಿದ್ದರಾಮಯ್ಯ ದಂಗಾದರು!

ಸಂವಿಧಾನವನ್ನು ಅಸ್ಖಲಿತವಾಗಿ ವಾಚನ ಮಾಡುವ 5-ವರ್ಷದ ಬಾಲಕನ ಪ್ರತಿಭೆ ಕಂಡು ಸಿದ್ದರಾಮಯ್ಯ ದಂಗಾದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 31, 2024 | 6:46 PM

ಯುಕೆಜಿಯಲ್ಲಿಓದುವ ವಿದ್ಯಾರ್ಥಿ ಹರ್ಷವರ್ಧನನ್ನು ರಾಜ್ಯದ ಸಮಾಜ ಕಲ್ಯಾಣ ಖಾತೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಎತ್ತಿಕೊಂಡು, ರಾಜ್ಯದ ಮುಖ್ಯಮಂತ್ರಿಯೇ ಶಾಲು ಹೊದಿಸಿ, ಹಾರ ಹಾಕಿ ನೆನಪಿನ ಕಾಣಿಕೆ ಮತ್ತು ಉಡುಗೊರೆ ಕೊಡುವುದನ್ನು ನೋಡುವಾಗ ಮಗುವಿನ ತಂದೆ ನಟರಾಜ ಮತ್ತು ತಾಯಿಗೆ ಸಂತಸವಾಗದಿರುತ್ತದೆಯೇ?

ಬೆಂಗಳೂರು: ಐದು-ವರ್ಷ ವಯಸ್ಸಿನ ಪುಟಾಣಿ ಹರ್ಷವರ್ಧನ (Harshavardhan) ತಾಯಿ-ತಂದೆಗೆ ಇವತ್ತು ನಿಸ್ಸಂದೇಹವಾಗಿ ಮರೆಯಲಾಗದ ದಿನ. ಯಾಕೆ ಅನ್ನೋದನ್ನು ದೃಶ್ಯಗಳಲ್ಲಿ ನೋಡಬಹುದು. ಜಿಲ್ಲೆಯ ಕನಕಪುರ ತಾಲ್ಲೂಕಿನ ಬಾಳೆಗುಂಡಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಯುಕೆಜಿ (UKG) ವಿದ್ಯಾರ್ಥಿ ಹರ್ಷವರ್ಧನನ್ನು ರಾಜ್ಯದ ಸಮಾಜ ಕಲ್ಯಾಣ ಖಾತೆ ಸಚಿವ ಡಾ ಹೆಚ್ ಸಿ ಮಹಾದೇವಪ್ಪ (HC Mahadevappa) ಎತ್ತಿಕೊಂಡು, ರಾಜ್ಯದ ಮುಖ್ಯಮಂತ್ರಿಯೇ ಶಾಲು ಹೊದಿಸಿ, ಹಾರ ಹಾಕಿ, ನೆನಪಿನ ಕಾಣಿಕೆ ಮತ್ತು ಉಡುಗೊರೆ ಕೊಡುವುದನ್ನು ನೋಡುವಾಗ ಮಗುವಿನ ತಂದೆ ನಟರಾಜ ಮತ್ತು ತಾಯಿಗೆ ಸಂತಸವಾಗದಿರುತ್ತದೆಯೇ? ಹರ್ಷವರ್ಧನನ ಸಾಧನೆ ಏನು ಗೊತ್ತಾ? ಅವನು ಭಾರತದ ಸಂವಿಧಾನವನ್ನು ಅಸ್ಖಲಿತವಾಗಿ, ನಿರರ್ಗಳವಾಗಿ, ಭಕ್ತಿ ಮತ್ತು ಶ್ರದ್ಧೆಯಿಂದ ವಾಚನ ಮಾಡುತ್ತಾನಂತೆ! ಅವನ ಪ್ರಚಂಡ ಪ್ರತಿಭೆಗೆ ಸಿದ್ದರಾಮಯ್ಯ ಸಹ ತಲೆದೂಗಿದರು. ನಗರದಲ್ಲಿ ಆಯೋಜಿಲಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಗಣ್ಯರು ಪುಟಾಣಿ ಹರ್ಷವರ್ಧನನ್ನು ಸತ್ಕriಸಿದರು. ಕಾರ್ಯಕ್ರಮದ ನಿರೂಪಕ ಹರ್ಷವರ್ಧನನ್ನು ಹಿರಿಯರೂ ಅನುಕರಿಸಬೇಕೆಂದು ಹೇಳಿದ್ದು ಅತ್ಯಂತ ಸೂಕ್ತವಾಗಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ