ಲೋಕಕಲ್ಯಾಣಕ್ಕಾಗಿ ಬೆಂಗಳೂರಿನಿಂದ ತಿರುಪತಿಗೆ ಸತತ 13ನೇ ವರ್ಷ ಪಾದಯಾತ್ರೆ ಹೊರಟ ಭಕ್ತರ ತಂಡ

ಲೋಕಕಲ್ಯಾಣಕ್ಕಾಗಿ ಬೆಂಗಳೂರಿನಿಂದ ತಿರುಪತಿಗೆ ಸತತ 13ನೇ ವರ್ಷ ಪಾದಯಾತ್ರೆ ಹೊರಟ ಭಕ್ತರ ತಂಡ

ನವೀನ್ ಕುಮಾರ್ ಟಿ
| Updated By: ಸಾಧು ಶ್ರೀನಾಥ್​

Updated on: Jan 31, 2024 | 6:03 PM

ಲೋಕ ಕಲ್ಯಾಣದ ನಿಮಿತ್ತ ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಲಿ ಅಂತ 30 ಕ್ಕೂ ಅಧಿಕ ಭಕ್ತರು ಬೆಂಗಳೂರಿನಿಂದ ತಿರುಪತಿಗೆ ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ಚಲ್ಲಹಳ್ಳಿ ಗ್ರಾಮದಿಂದ 30ಕ್ಕೂ ಅಧಿಕ ಭಕ್ತರು 6 ದಿನಗಳ ತಿರುಮಲ ತಿರುಪತಿ ಪಾದಯಾತ್ರೆ ಹೊರಟಿದ್ದು ಪಾದಯಾತ್ರಿಗಳಿಗೆ ಗ್ರಾಮಸ್ಥರು ಬೀಳ್ಕೊಡುಗೆ ಕೊಟ್ಟಿದ್ದಾರೆ.

ಕಳೆದ 12 ವರ್ಷಗಳಿಂದ ಪ್ರತಿ ವರ್ಷ ಈ ಗ್ರಾಮಸ್ಥರು ಪಾದಯಾತ್ರೆ ಮಾಡ್ತಿದ್ದು 13ನೇ ವರ್ಷವು ಯಾತ್ರೆಯನ್ನ ಮುಂದುವರೆಸಿದ್ದಾರೆ. ಜೊತೆಗೆ ಈ ಬಾರಿ ರಾಜ್ಯದಲ್ಲಿ ಸಮರ್ಪಕ ಮಳೆ ಬೆಳೆಯಿಲ್ಲದೆ ರೈತರು ಕಂಗಾಲಾಗಿದ್ದು ಮುಂದಿನ ದಿನಗಳಲ್ಲಿಯಾದರೂ ಉತ್ತಮ ಮಳೆ ಬೆಳೆಯಾಗಲಿ ಅಂತ ಗ್ರಾಮಸ್ಥರು ಲೋಕ ಕಲ್ಯಾಣದ ಹರಕೆ ಹೊತ್ತು ಪಾದಯಾತ್ರೆಗೆ ತೆರಳಿದ್ದಾರೆ. ಇನ್ನೂ ಆರು ದಿನಗಳ ಕಾಲ ಕಾಲ್ನಡಿಗೆಯಲ್ಲೆ 30 ಜನ ಭಕ್ತರು ಭಜನೆ ಮೂಲಕ ತಿರುಪತಿಗೆ ತೆರಳಲಿದ್ದು 7ನೇ ದಿನ ಶ್ರೀನಿವಾಸನ ದರ್ಶನ ಮಾಡಿ ವಾಪಸ್ ಮರಳಲಿದ್ದಾರೆ ಎಂದು ಪಾದಯಾತ್ರಿ ಚೇತನ್ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ