ಕೋಲಾರದ ಕ್ಲಾಕ್ ಟಾವರ್ ಮೇಲೆ ಹಾರಿದ ರಾಷ್ಟ್ರಧ್ವಜ, ವಿವಾದದ ಸಾಧ್ಯತೆ ದೂರ ಮಾಡಿದ ಜಿಲ್ಲಾಡಳಿತ

ಕೋಲಾರದ ಕ್ಲಾಕ್ ಟಾವರ್ ಮೇಲೆ ಹಾರಿದ ರಾಷ್ಟ್ರಧ್ವಜ, ವಿವಾದದ ಸಾಧ್ಯತೆ ದೂರ ಮಾಡಿದ ಜಿಲ್ಲಾಡಳಿತ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 31, 2024 | 5:04 PM

ಟಾವರ್ ಮೇಲೆ ರಾಷ್ಟ್ರಧ್ವಜ ಹಾರಿಸುತ್ತಿರುವ ವಿಹಂಗಮ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ಸುತ್ತಲಿನ ಪರಿಸರ ರಮಣೀಯ, ಶಾಂತಿಪೂರ್ಣ ಮತ್ತು ಉಲ್ಲಾಸಮಯವಾಗಿ ಕಾಣುತ್ತದೆ. ಮುಂದಾಗಬಹುದಾಗಿದ್ದ ತೊಂದರೆಯನ್ನು ವಿವೇಚನೆಯಿಂದ ದೂರಮಾಡಿದ ಕೋಲಾರ ಜಿಲ್ಲಾಡಳಿತ ಅಭಿನಂದನಾರ್ಹ.

ಕೋಲಾರ: ಮಂಡ್ಯದ ಕೆರಗೋಡು ಗ್ರಾಮದಲ್ಲಿ ಜರುಗಿದ ಹನುಮ ಧ್ವಜ ವಿವಾದ (Hanuma Flag Row) ಕೋಲಾರಕ್ಕೂ ಪಸರಿಸಿದಂತೆ ತಡೆಯಲಾಗಿದೆ. ಕೋಲಾರದ ಕ್ಲಾಕ್  ಟಾವರ್ (Clark Tower) ಒಂದು ಲ್ಯಾಂಡ್ ಮಾರ್ಕ್ ಪ್ರದೇಶದ ಜೊತೆಗೆ ಸೂಕ್ಷ್ಮ ಪ್ರದೇಶವೂ ಹೌದು. ಈ ಟಾವರ್ ಅನ್ನು ಮುಸ್ಲಿಂ ಸಮುದಾಯದವರು ಧ್ವಜಗಳನ್ನು ಹಾರಿಸಲು ಬಳಸಿದ್ದು ಆಗಾಗ ವಿವಾದಕ್ಕೆ ಕಾರಣವಾಗುತಿತ್ತು ಮತ್ತು ಸಾರ್ವಜನಿಕ ಸ್ಥಳವನ್ನು ಮುಸಲ್ಮಾನರು ಬಳಸಲು ಅನುಮತಿ ನೀಡಿದ್ದಕ್ಕೆ ಸ್ಥಳೀಯ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ (S Muniswamy) ಹಲವು ಬಾರಿ ಆಕ್ಷೇಪಣೆ ಎತ್ತಿದ್ದರು. ಕೆರಗೋಡು ಘಟನೆಯ ಬಳಿಕ ಕ್ಲಾಕ್ ಟಾವರ್ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿತ್ತು. ಇಲ್ಲೂ ಧಾರ್ಮಿಕ ಮನಸ್ತಾಪ, ಗಲಾಟೆ, ದಳ್ಳುರಿ ಆರಂಭವಾಗಬಹುದಾದ ಸಂಗತಿಯನ್ನು ಮನಗಂಡ ಜಿಲ್ಲಾಡಳಿತ ಕೂಡಲೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ಕ್ಲಾಕ್ ಟಾವರ್ ಮೇಲೆ ತಿರಂಗವನ್ನು ಹಾರಿಸಿದ್ದಾರೆ. ಟಾವರ್ ಮೇಲೆ ರಾಷ್ಟ್ರಧ್ವಜ ಹಾರಿಸುತ್ತಿರುವ ವಿಹಂಗಮ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ಸುತ್ತಲಿನ ಪರಿಸರ ರಮಣೀಯ, ಶಾಂತಿಪೂರ್ಣ ಮತ್ತು ಉಲ್ಲಾಸಮಯವಾಗಿ ಕಾಣುತ್ತದೆ. ಮುಂದಾಗಬಹುದಾಗಿದ್ದ ತೊಂದರೆಯನ್ನು ವಿವೇಚನೆಯಿಂದ ದೂರಮಾಡಿದ ಕೋಲಾರ ಜಿಲ್ಲಾಡಳಿತ ಅಭಿನಂದನಾರ್ಹ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ