ಮದುವೆ ಆಗುವ ಹುಡುಗಿ ಹೇಗಿರಬೇಕು: ವಿನಯ್ ರಾಜ್ಕುಮಾರ್ ಕಲ್ಪನೆ ಹೀಗಿದೆ
Vinay Rajkumar: ವಿನಯ್ ರಾಜ್ಕುಮಾರ್ ಮದ್ವೆ ಆಗುವ ಹುಡುಗಿ ಹೇಗಿರಬೇಕು? ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿರುವ ವಿನಯ್, ಉತ್ತರ ಹೀಗಿದೆ.
ರಾಘವೇಂದ್ರ ರಾಜ್ಕುಮಾರ್ ಪುತ್ರ ವಿನಯ್ ರಾಜ್ಕುಮಾರ್ (Vinay Rajkumar) ನಟನೆಯ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತಿದೆ. ಸಿನಿಮಾವನ್ನು ಸಿಂಪಲ್ ಸುನಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಲವರ್ ಬಾಯ್ ಆಗಿ ವಿನಯ್ ರಾಜ್ಕುಮಾರ್ ನಟಿಸಿದ್ದಾರೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿತರರಾಗಿರುವ ವಿನಯ್ ರಾಜ್ಕುಮಾರ್ಗೆ ನಿಮ್ಮ ಕನಸಿನ ಹುಡುಗಿ ಹೇಗಿರಬೇಕು? ಎಂಬ ಪ್ರಶ್ನೆ ಎದುರಾಗಿದೆ. ಪ್ರಶ್ನೆಗೆ ಉತ್ತರಿಸಿರುವ ವಿನಯ್ ರಾಜ್ಕುಮಾರ್, ಹುಡುಗಿ ಹೀಗರಬೇಕು, ಹಾಗಿರಬೇಕು ಎಂಬ ಕಲ್ಪನೆಗಳು ಸರಿಯಲ್ಲ ಎಂಬುದು ನನ್ನ ವೈಯಕ್ತಿಕ ಭಾವನೆ, ಹೊಂದಿಕೊಂಡು ಹೋಗುವುದೇ ಜೀವನ ಎಂದು ನಂಬುವನು ನಾನು ಎಂದು ಉತ್ತರಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos