Daily Devotional: ನಿಮ್ಮ ಮಕ್ಕಳು ಓದುತ್ತಿಲ್ವಾ ಈ ವಿಡಿಯೋದಲ್ಲಿದೆ ಪರಿಹಾರ

Daily Devotional: ನಿಮ್ಮ ಮಕ್ಕಳು ಓದುತ್ತಿಲ್ವಾ ಈ ವಿಡಿಯೋದಲ್ಲಿದೆ ಪರಿಹಾರ

ವಿವೇಕ ಬಿರಾದಾರ
|

Updated on: Feb 09, 2024 | 6:54 AM

ವಿದ್ಯೆ ಉಳ್ಳವನ ಮುಖವು ಮುದ್ದು ಬರುವಂತಿಕ್ಕು, ವಿದ್ಯೆಯಿಲ್ಲದವನ ಬರಿ ಮುಖವು ಹಾಳೂರ ಹದ್ದಿನಂತಿಕ್ಕು ಸರ್ವಜ್ಞ. ಮಕ್ಕಳು ವಿದ್ಯಾಭಾಸ್ಯದ ಕಡೆ ಗಮನಹರಿಸಬೇಕಾದರೆ ಏನು ಮಾಡಬೇಕು? ಇದರಲ್ಲಿ ಪೋಷಕರ ಪಾತ್ರ ಏನು? ಎಂಬುವ ಪ್ರಶ್ನೆಗಳಿಗೆ ಉತ್ತರ ಬಸವರಾಜ ಗುರೂಜಿ ತಿಳಿಸಿದ್ದಾರೆ...

ವಿದ್ಯೆ ಉಳ್ಳವನ ಮುಖವು ಮುದ್ದು ಬರುವಂತಿಕ್ಕು, ವಿದ್ಯೆಯಿಲ್ಲದವನ ಬರಿ ಮುಖವು ಹಾಳೂರ ಹದ್ದಿನಂತಿಕ್ಕು ಸರ್ವಜ್ಞ. ವಿದ್ಯ ಬಹಳ ಮುಖ್ಯ. ಸಮಾಜದ ಅಥವಾ ನಾಡಿನ ಅಥವಾ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ವಿದ್ಯಾವಂತನಾಗಬೇಕು ಎಂದು ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ. ಇನ್ನು ಮಕ್ಕಳು ವಿದ್ಯಾವಂತರಾಗಬೇಕು ಎಂಬ ಆಸೆ ಪ್ರತಿಯೊಬ್ಬ ತಂದೆ-ತಾಯಿಗೆ ಇರುತ್ತದೆ. ನಮ್ಮ ಮಗ ವಿದ್ಯಾವಂತನಾಗಬೇಕು, ಸಮಾಜದಲ್ಲಿ ಉನ್ನತ ಸ್ಥಾನಮಾನದಲ್ಲಿ ಇರಬೇಕು ಎಂಬ ಆಶಯವನ್ನು ಇಟ್ಟುಕೊಂಡಿರುತ್ತಾರೆ. ಆದರೆ ಕೆಲ ಮಕ್ಕಳು ವಿಧ್ಯಾಭ್ಯಾಸದ ಗಮನ ಹರಿಸದೆ ಕೆಟ್ಟ ದಾರಿಯನ್ನು ಹಿಡಿಯುತ್ತಾರೆ. ಇನ್ನು ಕೆಲ ಮಕ್ಕಳಿಗೆ ವಿದ್ಯಾಭಾಸದ ಕಡೆ ಲಕ್ಷ್ಯವಿರುವುದಿಲ್ಲ. ಈ ಮಕ್ಕಳ ಚಿತ್ತ ಬೇರೆ ಬೇರೆ ಚುಟುವಟಿಕೆಗಳಲ್ಲಿ ಇರುತ್ತದೆ. ಇನ್ನು ಮಕ್ಕಳು ವಿದ್ಯಾಭಾಸ್ಯದ ಕಡೆ ಗಮನಹರಿಸಬೇಕಾದರೆ ಏನು ಮಾಡಬೇಕು? ಇದರಲ್ಲಿ ಪೋಷಕರ ಪಾತ್ರ ಏನು? ಎಂಬುವ ಪ್ರಶ್ನೆಗಳಿಗೆ ಉತ್ತರ ಬಸವರಾಜ ಗುರೂಜಿ ತಿಳಿಸಿದ್ದಾರೆ…