ದಾವಣಗೆರೆ: ನಡುರಸ್ತೆಯಲ್ಲಿ ನೆಟ್ಟ ಕಂಬಕ್ಕೆ ಬಲಿಯಾದ ಬೈಕ್ ಸವಾರ; ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ದಾವಣಗೆರೆ: ನಡುರಸ್ತೆಯಲ್ಲಿ ನೆಟ್ಟ ಕಂಬಕ್ಕೆ ಬಲಿಯಾದ ಬೈಕ್ ಸವಾರ; ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 08, 2024 | 9:29 PM

ದಾವಣಗೆರೆ ನಗರದ ನಿಟ್ಟುವಳ್ಳಿ 60 ಅಡಿ ರಸ್ತೆಯ ಆಂಜನೇಯ ದೇವಸ್ಥಾನದ ಬಳಿ ನಡುರಸ್ತೆಯಲ್ಲಿ ನಿಲ್ಲಿಸಿದ್ದ ಕಂಬಕ್ಕೆ ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಎದುರುಗಡೆ ಬರುತ್ತಿದ್ದ ಬೈಕ್​ ಸವಾರನ ಮೇಲೆ ಕಂಬ ಬಿದ್ದಿದೆ. ದುರಾದೃಷ್ಟವಶಾತ್​ ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ದಾವಣಗೆರೆ, ಫೆ.08: ನಡುರಸ್ತೆಯಲ್ಲಿ ನೆಟ್ಟ ಕಂಬಕ್ಕೆ ಬೈಕ್ ಸವಾರ ಬಲಿಯಾದ ಘಟನೆ ದಾವಣಗೆರೆ ನಗರದ ನಿಟ್ಟುವಳ್ಳಿ 60 ಅಡಿ ರಸ್ತೆಯ ಆಂಜನೇಯ ದೇವಸ್ಥಾನದ ಬಳಿ ನಡೆದಿದೆ. ನಿಟ್ಟುವಳ್ಳಿ ಭಗೀರಥ ಸರ್ಕಲ್ ಬಳಿಯ ನಿವಾಸಿ ಗಣೇಶ್ (40) ಸಾವನ್ನಪ್ಪಿದ ವ್ಯಕ್ತಿ. ರಸ್ತೆ ನಡುವೆ ಬ್ಯಾನರ್ ಕಟ್ಟಲು ಕಂಬ ಹಾಕಲಾಗಿತ್ತು. ಅದನ್ನು ಗಮನಿಸಿದೆ ಬಂದ ಟಿಟಿ ವಾಹನ, ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಂಬ ಮುರಿದು ಎದುರಿನಿಂದ ಬೈಕ್ ಸವಾರನ ತಲೆಯ ಮೇಲೆ ಬಿದ್ದಿದೆ. ಕೂಡಲೇ ಬೈಕ್​ ಸವಾರನನ್ನು ಆಸ್ಪತ್ರೆಗೆ ಸೇರಿಸಲಾದರೂ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ನಡು ರಸ್ತೆಯಲ್ಲಿ‌ಕಂಬ ನೆಟ್ಟವರ ವಿರುದ್ದ ಜನರು ಆಕ್ರೋಶ ಹೊರ ಹಾಕಿದ್ದು, ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಇನ್ನು ಘಟನೆ ಕುರಿತು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ