‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು

Edited By:

Updated on: Oct 07, 2026 | 8:53 AM

Bigg Boss Kannada: ಬಿಗ್ ಬಾಸ್ ಕನ್ನಡ ಮನೆಯಲ್ಲಿ 'ರಾಕ್ಷಸರು ಹಾಗೂ ಗಂಧರ್ವರು' ಟಾಸ್ಕ್ ವೇಳೆ ರಣರಂಗ ಸೃಷ್ಟಿಯಾಗಿದೆ. ರಾಕ್ಷಸನಾಗಿರುವ ಮಂಜು, ಯಶಸ್ ವಿರುದ್ಧ 'ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ' ಎಂದು ಅತಿಯಾದ ನಿಂದನೀಯ ಪದಬಳಕೆ ಮಾಡಿದ್ದಾರೆ. ಮಂಜು ಅವರ ಈ ವೈಯಕ್ತಿಕ ವಾಗ್ದಾಳಿಯಿಂದ ಕಂಗಾಲಾದ ಯಶಸ್ ಕಣ್ಣೀರು ಹಾಕಿದ್ದಾರೆ.

ಬಿಗ್ ಬಾಸ್ ಕನ್ನಡ ಮನೆಯಲ್ಲಿ ‘ರಾಕ್ಷಸರು ಹಾಗೂ ಗಂಧರ್ವರು’ ಟಾಸ್ಕ್ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸ್ಪರ್ಧಿಗಳ ನಡುವಿನ ವಾಕ್ಸಮರ ಮನೆ ಅಂಗಳದಲ್ಲಿ ಕಿಚ್ಚು ಹೊತ್ತಿಸಿದೆ. ಈ ಟಾಸ್ಕ್‌ನ ಮಧ್ಯೆ ರಾಕ್ಷಸನ ಅವತಾರದಲ್ಲಿದ್ದ ಮಂಜು ಹಾಗೂ ಯಶಸ್ ನಡುವೆ ಭಾರಿ ಮಟ್ಟದ ವಾಗ್ವಾದ ನಡೆದಿದೆ. ವೈಯಕ್ತಿಕ ವಿಷಯ ಇಟ್ಟುಕೊಂಡು ಮಂಜು ದಾಳಿ ಮಾಡಿದ್ದಾರೆ.

ಸ್ವಿಮ್ಮಿಂಗ್ ಪೂಲ್ ಬಳಿಕ ಹಾಗೂ ಟಾಸ್ಕ್ ಅಂಗಳದಲ್ಲಿ ಯಶಸ್ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಮಂಜು, ‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’ ಎಂದು ಅತ್ಯಂತ ಆಕ್ರೋಶದಿಂದ ತೀವ್ರ ಪದಬಳಕೆ ಮಾಡಿ ವಾಗ್ದಾಳಿ ನಡೆಸಿದ್ದಾರೆ. ಮಂಜು ಅವರ ನಿಂದನೀಯ ಮಾತುಗಳು ಬಿಗ್ ಬಾಸ್ ಮನೆಯ ವಾತಾವರಣವನ್ನು ಏಕಾಏಕಿ ಕಾವೇರುವಂತೆ ಮಾಡಿವೆ.

ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಯಶಸ್, ‘ಮಾತನಾಡುವಾಗ ಮಾತು ಮತ್ತು ಪದಬಳಕೆ ಬಗ್ಗೆ ಎಚ್ಚರಿಕೆಯಿಂದ ಇರು’ ಎಂದು ನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ. ಮಂಜು ಅವರ ಈ ವೈಯಕ್ತಿಕ ಆರೋಪಗಳು ಹಾಗೂ ಆಕ್ರೋಶದ ಮಾತುಗಳಿಂದಾಗಿ ಯಶಸ್ ಕಣ್ಣೀರು ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Oct 07, 2026 08:43 AM
Loading...
Unable to load recommendations.
Follow Us
ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More