ವರ್ತೂರು ಸಂತೋಷ್​-ತನಿಷಾ ನಡುವಿನ ಸಂಬಂಧ ಎಂಥದ್ದು? ಹತ್ತಿರದಿಂದ ಕಂಡ ಪವಿ ಹೇಳಿದ್ದಿಷ್ಟು..

Edited By:

Updated on: Dec 19, 2023 | 1:07 PM

ಬಿಗ್​ ಬಾಸ್​ ಮನೆಯಲ್ಲಿ ವರ್ತೂರು ಸಂತೋಷ್​ ಮತ್ತು ತನಿಷಾ ಕುಪ್ಪಂಡ ಅವರು ಬಹಳ ಆಪ್ತವಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವಂಥದ್ದು. ಈ ಬಗ್ಗೆ ಪವಿ ಪೂವಪ್ಪ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಎಲಿಮಿನೇಟ್ ಆದ ಬಳಿಕ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ವೈಲ್ಡ್​ ಕಾರ್ಡ್​ ಎಂಟ್ರಿ ಮೂಲಕ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದ ಮಾಡೆಲ್​ ಪವಿ ಪೂವಪ್ಪ (Pavi Poovappa) ಅವರು ಎಲಿಮಿನೇಟ್​ ಆದರು. ಬಿಗ್​ ಬಾಸ್​ ಮನೆಯಲ್ಲಿ ಗುಂಪುಗಾರಿಕೆ ಇದೆ. ಹಾಗೆಯೇ ಕೆಲವರ ನಡುವೆ ಆಪ್ತತೆ ಹೆಚ್ಚಿದೆ. ವರ್ತೂರು ಸಂತೋಷ್​ (Varthur Santhosh) ಮತ್ತು ತನಿಷಾ ಕುಪ್ಪಂಡ (Tanisha Kuppanda) ಅವರು ಪರಸ್ಪರ ಕ್ಲೋಸ್​ ಆಗಿದ್ದಾರೆ. ‘ವರ್ತೂರು ಸಂತೋಷ್​ ಅವರನ್ನು ನೋಡಿದರೆ ತನಿಷಾ ನಾಚಿಕೊಳ್ಳುತ್ತಿದ್ದರು. ತನಿಷಾ ಆಸ್ಪತ್ರೆಗೆ ಹೋದಾಗ ವರ್ತೂರು ಸಂತೋಷ್​ ಸಖತ್​ ಮಿಸ್​ ಮಾಡಿಕೊಳ್ಳುತ್ತಿದ್ದರು. ಅದನ್ನು ನಾನು ನೇರವಾಗಿ ಕೇಳಿದೆ. ಆ ರೀತಿ ಏನೂ ಇಲ್ಲ ಅಂತ ವರ್ತೂರು ಹೇಳಿದ್ದರು. ಹೊರಗಡೆ ಹೋದ ಬಳಿಕ ಮದುವೆ ಆಗಲ್ಲ ಅಂತಲೂ ಹೇಳಿದ್ದರು. ಅದು ಒನ್​ ಸೈಡೆಡ್​ ಆಗಿರಬಹುದು. ಕ್ಯಾಮೆರಾದಲ್ಲಿ ಕಾಣಬೇಕು ಎಂಬ ಕಾರಣದಿಂದಲೂ ಹಾಗೆ ಮಾಡಿರಬಹುದು’ ಎಂದು ಪವಿ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಂಗಳ ರಾಜ್

ಮಂಗಳ ರಾಜ್ ಮೂಲತಃ ಮಧುಗಿರಿ ಬಳಿಯ ರತ್ನಗಿರಿ ರಂಗಾಪುರದವರು. ಇವರು ಸುದ್ದಿ ಮಧ್ಯಮಕ್ಕೆ ಕಾಲಿಟ್ಟು 13 ವರ್ಷಗಳಾಗಿವೆ. ಈಟಿವಿಯಲ್ಲಿ ಇಂಟರ್​ನ್​ಶಿಪ್​ , ಮಧ್ಯಮದ ಅ, ಆ ಇ ಈ ಕಲಿತಿದ್ದು ಕಸ್ತೂರಿ ನ್ಯೂಸ್ 24 ನಲ್ಲಿ ನಂತ್ರ ರಾಜ್ ನ್ಯೂಸ್, ದಿಗ್ವಿಜಯ ನ್ಯೂಸ್ ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. 2021ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮುಂದುವರಿಸಿದ್ದಾರೆ. ಸಿನಿಮಾ ಅಂದ್ರೆ ಬಾಲ್ಯದಿಂದಲೂ ಹುಚ್ಚು. ಅರಸಿ ಬಂದಿದ್ದು ಸಿನಿಮಾ ಜರ್ನಲಿಸ್ಟ್ ಕೆಲಸ. ಸಿನಿಮಾ ಸುದ್ದಿಗಳ ಕವರೇಜ್, ಸಿನಿಮಾ ಹಾಗೂ ಸಿನಿಮಾ ಮಂದಿಯ ವಿವಾದಗಳು, ವಿಮರ್ಶೆ, ಸಿನಿಮಾದವರ ಸಾವು ನೋವು ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವುಗಳ ವರದಿಗಾರಿಕೆ ಇವರ ಕಾಯಕ. ಸಿನಿಮಾ ನೋಡುವುದೇ ಎಲ್ಲಾ ಆಸಕ್ತಿಗಳಿಗಿಂತ ಹೆಚ್ಚು ಆಸಕ್ತಿ.

Read More