Bigg Boss Kannada: ಅತಿಯಾಗಿ ಕೂಗಾಡಿದವರಿಗೆ ಮತ್ತೆ ಕ್ಲಾಸ್​ ತೆಗೆದುಕೊಳ್ತಾರಾ ಕಿಚ್ಚ ಸುದೀಪ್​?

Updated on: Nov 11, 2023 | 10:09 AM

ಟಾಸ್ಕ್​ ಇದ್ದಾಗ ಬಿಗ್​ ಬಾಸ್ ಸ್ಪರ್ಧಿಗಳು ಒಬ್ಬರಿಗೊಬ್ಬರು ಬೈಯ್ದಾಡಿಕೊಂಡಿದ್ದಾರೆ. ಕೆಲವರು ತಂತ್ರದ ಜೊತೆಗೆ ಕುತಂತ್ರವನ್ನೂ ಮಾಡಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಕಿಚ್ಚ ಸುದೀಪ್​ ಮಾತನಾಡಲಿದ್ದಾರೆ. ಕಳೆದ ವಾರ ವಿನಯ್​ ಗೌಡ ಅವರಿಗೆ ಕಿಚ್ಚ ಕ್ಲಾಸ್​ ತೆಗೆದುಕೊಂಡಿದ್ದರು. ಈ ಬಾರಿ ಯಾರಿಗೆ ಪಾಠ ಮಾಡಲಿದ್ದಾರೆ ಎಂಬ ಕೌತುಕ ಮೂಡಿದೆ.

ನಟ ಕಿಚ್ಚ ಸುದೀಪ್​ (Kichcha Sudeep) ಅವರು 5ನೇ ವಾರದ ಪಂಚಾಯ್ತಿ ನಡೆಸಲು ಸಜ್ಜಾಗಿದ್ದಾರೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋನಲ್ಲಿ ಈ ಬಾರಿ ಕೂಗಾಟ, ಕಿರುಚಾಟ ಜೋರಾಗಿದೆ. ಟಾಸ್ಕ್​ ಇದ್ದಾಗ ಒಬ್ಬರಿಗೊಬ್ಬರು ಬೈಯ್ದಾಡಿಕೊಂಡಿದ್ದಾರೆ. ಕೆಲವರು ತಂತ್ರದ ಜೊತೆಗೆ ಕುತಂತ್ರವನ್ನೂ ಮಾಡಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಕಿಚ್ಚ ಸುದೀಪ್​ ಮಾತನಾಡಲಿದ್ದಾರೆ. ಕಳೆದ ವಾರ ವಿನಯ್​ ಗೌಡ (Vinay Gowda) ಅವರಿಗೆ ಕಿಚ್ಚ ಕ್ಲಾಸ್​ ತೆಗೆದುಕೊಂಡಿದ್ದರು. ಈ ಬಾರಿ ಯಾರಿಗೆ ಪಾಠ ಮಾಡಲಿದ್ದಾರೆ ಎಂಬ ಕೌತುಕ ಮೂಡಿದೆ. ನವೆಂಬರ್​ 11ರ ವೀಕೆಂಡ್​ ಸಂಚಿಕೆ ಹೇಗಿರಲಿದೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ. ಈ ಎಪಿಸೋಡ್​ ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಬಿಗ್​ ಬಾಸ್​ (Bigg Boss Kannada) ಶೋ ಉಚಿತವಾಗಿ ವೀಕ್ಷಿಸಲು ಅವಕಾಶ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Nov 11, 2023 09:45 AM
Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More